ನಗರದ ಕೃಷಿ ವಿವಿಯ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿಯ ಯುವತಿ ಅಶ್ವಿನಿ ಅತ್ಯಾಚಾರ ಕೊಲೆ ಪ್ರಕರಣ, ಲಿಂಗಸುಗೂರಿನ ರಾಣೆಮ್ಮ, ಹದಿನಾಳ ಗ್ರಾಮದ ಬೂಮಾನಂದ ಕೊಲೆ ಪ್ರಕರಣಗಳನ್ನು ಖಂಡಿಸುತ್ತೇನೆ. ಕೊಲೆಗೆ ಕಾರಣ ಏನು, ಯಾಕೆ ಆಗುತ್ತಿವೆಂದು ಸ್ಥಳಕ್ಕೆ ಹೋಗಿ ತಿಳಿದುಕೊಳ್ಳುವೆ. ರಾಜ್ಯದಲ್ಲಿ ನಿಜವಾಗಿಯು ಗೃಹ ಸಚಿವರು ಇದ್ದಾರಯೇ?, ಪ್ರಿಯಾಂಕ ಖರ್ಗೆಯವರು ಈ ಭಾಗದವರೇ ಆಗಿದ್ದರು ಏನು ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಗುರಿಯಾಗಿಟ್ಟುಕೊಂಡು ಓಡಾಡುತ್ತಿದ್ದರೆ ಸಾಕಾ, ಈ ಪ್ರಕರಣಗಳನ್ನು ಯಾರು ನೋಡುವರು, ಬಡವರಿಗೆ ನ್ಯಾಯ ಕೊಡುವ ಬದಲು ತಮ್ಮ ಚಪಲ ತೀರಿಸಿಕೊಳ್ಳುವುದರಲ್ಲೇ ಇದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.