ಒಳ ಮೀಸಲಾತಿ ರಾಜ್ಯ ಸರ್ಕಾರ ಅನ್ಯಾಯ

ನರಸಪ್ಪ ದಂಡೋರ
ನರಸಪ್ಪ ದಂಡೋರ
Published on
ರಾಯಚೂರು
ಒಳಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಾಡ್ಯ ಸಚಿವರ ಒತ್ತಡಕ್ಕೆ ಮಣಿದು ಇಡೀ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆಂದು ಮಾದಿಗ ಮೀಸಲಾತಿ ಹೊರಾಟ ಸಮಿತಿಯ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲೊ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಶೇ.5.25, ಶೇ.5.25 ಹಾಗೂ ಶೆ.4.50ಯಾಗಿ ಜಾರಿ ಮಾಡಿದ್ದು, ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಶೇ.6ರಷ್ಟು ಮೀಸಲಾತಿ ನೀಡುವಂತೆ ಸದಾಶಿವ ಆಯೋಗ, ನಾಗಮೋಹನದಾಸ ಆಯೋಗ ತಿಳಿಸಿದರೂ. ಅವುಗಳನ್ನು ಪರಿಗಣಿಸದೇ, ರಾಜ್ಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು, ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮ ಇಚ್ಚೇಯಂತೆ ಜಾರಿ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯ ಮೂಲತಃ ವಕೀಲರು ಎಂದು ಹೇಳುತ್ತಿದ್ದು, ಮಾದಿಗ ಸಮುದಾಯಕ್ಕೆ ನ್ಯಾಯಸಮೃತ ಮೀಸಲಾತಿ ನೀಡದೇ ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವವರಾಗಿದ್ದಾರೆ. ಈಗಾಗಲೇ ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗಳಾಗಿದ್ದು, ಅಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ಮಾದಿಗ ಸಮುದಾಯದ ಶಪಥವಾಗಿರುತ್ತದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ದುಳ್ಳಯ್ಯ ಗುಂಜಳ್ಳಿ, ಜಕ್ರಪ್ಪ ಹಂಚಿನಾಳ, ಹನುಮಂತ ಜುಲಮಗೇರಾ, ಭೀಮೇಶ ತುಂಟಾಪೂರ, ಯಲ್ಲಪ್ಪ ಡಿ.ರಾಂಪೂರ, ಅನೀಲಕುಮಾರ ತಲಮಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net