ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ

ಮಾನ್ವಿಯ ಬಸವ ವೃತ್ತದಲ್ಲಿ ಕಾರ್ಮಿಕ ಸಂಹಿತೆಗಳ ಅಧಿಸೂಚನೆ ಪ್ರತಿಗಳನ್ನು ಎಐಸಿಸಿಟಿಯು ಸುಟ್ಟು ಪ್ರತಿಭಟನೆ ನಡೆಸಿತು. ಪದಾಧಿಕಾರಿಗಳಾದ ಈಶಪ್ಪಗೌಡ, ವೆಂಕಟೇಶ್ ಕೋರಿ, ಚಾಂದ್‌ಸಾಬ್, ಗೋಪಾಲ್‌ರಾವ್, ಜಲೀಲ್ ಪಾಷಾ ಇತರರಿದ್ದರು.
ಮಾನ್ವಿಯ ಬಸವ ವೃತ್ತದಲ್ಲಿ ಕಾರ್ಮಿಕ ಸಂಹಿತೆಗಳ ಅಧಿಸೂಚನೆ ಪ್ರತಿಗಳನ್ನು ಎಐಸಿಸಿಟಿಯು ಸುಟ್ಟು ಪ್ರತಿಭಟನೆ ನಡೆಸಿತು. ಪದಾಧಿಕಾರಿಗಳಾದ ಈಶಪ್ಪಗೌಡ, ವೆಂಕಟೇಶ್ ಕೋರಿ, ಚಾಂದ್‌ಸಾಬ್, ಗೋಪಾಲ್‌ರಾವ್, ಜಲೀಲ್ ಪಾಷಾ ಇತರರಿದ್ದರು.
Published on
ಮಾನ್ವಿ: ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳ ಜಾರಿ ವಿರೋಧಿಸಿ ಪಟ್ಟಣದ ಬಸವ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಎಐಸಿಸಿಟಿಯು ಪ್ರತಿಭಟನೆ ನಡೆಸಿತು. 
ನಾಲ್ಕು ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಮರಣ ಶಾಸನವಾಗಿದ್ದು, ಕಾರ್ಮಿಕ ವರ್ಗ ಒಪ್ಪುವುದಿಲ್ಲ. ಆದ್ದರಿಂದ  ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸಬೇಕು, ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಪರ ಕಾಯ್ದೆಗಳನ್ನು ದುರ್ಬಲಗೊಳಿಸಿ, ಬಂಡವಾಳಶಾಹಿಗಳು ಮತ್ತು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಕೈ ಬಿಡಬೇಕು.
ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಕಾರ್ಮಿಕ ಸಂಘಟನೆಗಳು ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು. 
ಎಐಸಿಸಿಟಿಯು ಪದಾಧಿಕಾರಿಗಳಾದ ಈಶಪ್ಪಗೌಡ, ವೆಂಕಟೇಶ್ ಕೋರಿ, ಚಾಂದ್‌ಸಾಬ್, ರಾಜಾಸಾಬ್, ಗೋಪಾಲ್‌ರಾವ್, ಜಲೀಲ್ ಪಾಷಾ, ಇಮ್ರಾನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net