ಶಿಕ್ಷಣದ ಜತೆಗೆ ಸಂಸ್ಕಾರ ಮೈಗೂಡಿಸಿಕೊಳ್ಳಿ

ಜಾಲಿಹಾಳ ಗ್ರಾಮದ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಪವನಕುಮಾರ್ ಗುಂಡೂರು
ಜಾಲಿಹಾಳ ಗ್ರಾಮದ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಪವನಕುಮಾರ್ ಗುಂಡೂರು
Published on
ಸಿಂಧನೂರು: ವಿದ್ಯಾರ್ಥಿನಿಯರು ಕಷ್ಟಪಟ್ಟು ಓದುವುದರ ಜತೆಗೆ ಸಂಸ್ಕಾರವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಪವನಕುಮಾರ್ ಗುಂಡೂರು ಹೇಳಿದರು. 
ಜಾಲಿಹಾಳ ಗ್ರಾಮದ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ವಿದ್ಯಾರ್ಥಿನಿಯರು ಪಾಲಕರ ಮಾತನ್ನು ತಪ್ಪದೆ ಪಾಲಿಸಬೇಕು. ವಿದ್ಯಾವಂತರಾಗಿ ಬೆಳೆದು ಅವರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು. 
ಶಾಲೆಯ ಪ್ರಾಚಾರ್ಯ ಬಸವರಾಜ, ಪ್ರಮುಖರಾದ ಲಿಂಗಪ್ಪ ಗುಡೂರು, ಯಂಕಪ್ಪ ಕಟ್ಟಿಮನಿ, ಶಿಕ್ಷಣ ಪ್ರೇಮಿ ಎಚ್.ಪಂಪಾರಡ್ಡಿ, ಕಾಳಿಂಗಪ್ಪ, ಪ್ರಾಚಾರ್ಯರಾದ ಗುರುಪಾದಪ್ಪ, ಮಾಳಪ್ಪ, ಎಚ್.ಎಂ.ಸುರೇಶ, ಗ್ರಂಥಪಾಲಕ  ಎಸ್.ನಾಗರಾಜ, ಅರುಣಕುಮಾರ, ಚಲುವಯ್ಯ, ಅಂಗನವಾಡಿ ಶಿಕ್ಷಕಿ ಲಕ್ಷ್ಮೀ, ಹಾಸ್ಟೆಲ್ ವಾರ್ಡನ್ ಸವಿತಾ, ಶಿಕ್ಷಕಿ ಪುಷ್ಪಾಂಜಲಿ, ಅರುಣಕುಮಾರ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net