ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಲಿಂಗಸುಗೂರು ಹೋಬಳಿಯಲ್ಲಿ 85 ಹೆಕ್ಟೇರ್, ಮುದಗಲ್ಲ ಹೋಬಳಿಯಲ್ಲಿ 214 ಹೆಕ್ಟೇರ್ ಹಾಗೂ ಗುರುಗುಂಟ ಹೋಬಳಿಯಲ್ಲಿ 907 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿತ್ತು. ಇನ್ನು 2025-26ನೇ ಸಾಲಿನಲ್ಲಿ ಈ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಲಿಂಗಸುಗೂರು ಹೋಬಳಿಯಲ್ಲಿ 2,916 ಹೆಕ್ಟೇರ್, ಮುದಗಲ್ ಹೋಬಳಿಯಲ್ಲಿ 1,950 ಹೆಕ್ಟೇರ್ ಮತ್ತು ಗುರುಗುಂಟ ಹೋಬಳಿಯಲ್ಲಿ 1,810 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಕೃಷಿ ಇಲಾಖೆಯ ಸ್ವಂತ ದಾಖಲೆಗಳಲ್ಲೇ ಸಾವಿರಾರು ಹೆಕ್ಟೇರ್ ಬಿತ್ತನೆಯಾದ ಮಾಹಿತಿ ಇದ್ದರೂ, ಕ್ರಾಪ್ ಸರ್ವ ವರದಿಯಲ್ಲಿ ಮಾತ್ರ ಪ್ರತಿ ಹೋಬಳಿಯಲ್ಲಿ 125 ಹೆಕ್ಟೇರ್‌ಗಿಂತ ಕಡಿಮೆ ಬಿತ್ತನೆಯಾಗಿದೆ ಎಂದು ಉಲ್ಲೇಖಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.