ಕೇಂದ್ರದಿಂದ ಗಾಂಧೀಜಿಗೆ ಅವಮಾನ

 ಎನ್.ಎಸ್. ಬೋಸರಾಜು
ಎನ್.ಎಸ್. ಬೋಸರಾಜು
Published on

ಪ್ರಮುಖ ಮುಖ್ಯಾಂಶಗಳು

  • ಖಾತ್ರಿ
  • ಯೋಜನೆ
  • ಜಾರಿಗೆ
ಕವಿತಾಳ: ಕೆಲವೇ ದಿನಗಳಲ್ಲಿ ಕವಿತಾಳ-ಮಸ್ಕಿ ರಸ್ತೆಯು ರಾಜ್ಯ ಹೆದ್ದಾರಿಯಾಗಲಿದೆ. ಮಸ್ಕಿ ಕ್ಷೇತ್ರದ ನೀರಾವರಿ ಯೋಜನೆ 5ಎ ತ್ವರಿತವಾಗಿ ಮಾಡಲಾಗುವುದು ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಸಮೀಪದ ಬಳಗಾನೂರು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿ, ಬಡವರು ಉದ್ಯೊಗ ಕೊರತೆ ಎದುರಿಸಬಾರದು ಎಂದು ಯುಪಿಎ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಕೆಲಸ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮೂಲೆಗುಂಪು ಮಾಡಿ, ವಿಬಿ ಜಿ ರಾಮ್ ಜಿ ಯೋಜನೆ ಎಂದು ಮರುನಾಮಕರಣ ಮಾಡಿ ಗಾಂಧೀಜಿಗೆ ಅವಮಾನ ಮಾಡಿದೆ ಎಂದರು.
ಬಳ್ಳಾರಿ ಬ್ಯಾನರ್ ಗಲಾಟೆ ಘಟನೆಗೆ ಬಿಜೆಪಿಯವರೇ ಕಾರಣ ಎಂದ ಅವರು, ಎಸ್ಪಿ ಎತ್ತಂಗಡಿಯನ್ನು ಸಮರ್ಥಿಸಿಕೊಂಡರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟರಡ್ಡಿ ಹಾಲಾಪುರ, ಅಂದಾನಪ್ಪ ಗುಂಡಳ್ಳಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮೈಬುಸಾಬ್ ಮುದ್ದಾಪುರ, ಶ್ರೀಶೈಲಪ್ಪ ಪಾಮನಕಲ್ಲೂರು, ರಾಜಸಾಬ್ ಗುಡಿಹಾಳ, ಬಸವರಾಜಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net