ನಿವೇಶನಕ್ಕಾಗಿ ಆ.24ರಂದು ಅನಿರ್ದಿಷ್ಟಾವಧಿ ಧರಣಿ

ಹನುಮಸಾಗರದಲ್ಲಿ ಅಲೆಮಾರಿ ಸಮುದಾಯಗಳ ಧರಣಿ ಕುರಿತು ಸಭೆ ನಡೆಯಿತು. ಎಸ್ಸಿ-ಎಸ್ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಸದಸ್ಯ ಕಾಸೀಂ ವಿ. ಶ್ರೀಶಾಲ, ಪ್ರಮುಖರಾದ ದೇವರಾಜ ಹಾಜಾಳದಾರ, ಶರಣು ಹಿರೇಮಠ, ಬಸವರಾಜ ಗಾಣಿಗೇರ, ರಾಮಗಿರಿಯಪ್ಪ ಯ್ಯಸೇಗಾರ, ಸುರೇಶ ಸುಂಕದ ಇತರರಿದ್ದರು.

Published on

ಹನುಮಸಾಗರ: ಅಲೆಮಾರಿ ಸಮುದಾಯದವರಿಗೆ ನಿವೇಶನ ಮಂಜೂರು ಮಾಡಬೇಕೆಂದು ಆ.24ರಂದು ಪಪಂ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಸ್ಸಿ-ಎಸ್ಟಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಸದಸ್ಯ ಕಾಸೀಂ ವಿ. ಶ್ರೀಶಾಲ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಬಹಳ ವರ್ಷಗಳಿಂದ ಗುಡಿಸಲು, ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದವರಿಗೆ ನಿವೇಶನ ಮಂಜೂರು ಮಾಡಲು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 
ನಿತ್ಯ ವಿಷಜಂತುಗಳ ಭಯದಲ್ಲಿ ವಾಸ ಮಾಡಬೇಕಾಗಿದ್ದು, ನಿವೇಶನ ನೀಡಿ, ಗುಂಪು ಮನೆಗಳನ್ನು ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತದೆ. ಈಗಾಗಲೇ ತಾವರಗೇರಾ, ಮೆಣೇದಾಳ ಗ್ರಾಮದಲ್ಲಿ ಈ ಸಮುದಾಯದವರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ಹನುಮಸಾಗರದಲ್ಲಿ ಒಂದು ಕಡೆ ನಿವೇಶನ ನೀಡಬೇಕು ಎಂದು ಒತ್ತಾಯಿಸಲಾಗುವುದು. ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ ಎಂದರು. 
ಕರವೇ (ಸ್ವಾಭಿಮಾನಿ ಬಣ) ಯುವ ಘಟಕದ ಜಿಲ್ಲಾ ಅಧ್ಯಕ್ಷ ದೇವರಾಜ ಹಾಜಾಳದಾರ, ಪ್ರಜಾಶಕ್ತಿ ಸಮಿತಿ ಯುವ ಘಟಕದ ಶರಣು ಹಿರೇಮಠ, ಹೈ. ಕ.ಯುವಶಕ್ತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ರಾಮಗಿರಿಯಪ್ಪ ಯ್ಯಸೇಗಾರ, ಸುರೇಶ ಸುಂಕದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net