ಪೌಷ್ಟಿಕ ಆಹಾರದ ಘಟಕ ವೆಚ್ಚ ಹೆಚ್ಚಿಸದಿರುವುದು, ಪ್ಯಾಕೆಟ್ ಆಹಾರ ವಿತರಣೆಗೆ ಒತ್ತು, ಎಫ್‌ಆರ್‌ಸ್, ಇ-ಕೆವೈಸಿ ಹಾಗೂ ಪೋಷಣ್ ಟ್ರ್ಯಾಕರ್ ಮೂಲಕ ಅನಗತ್ಯ ಒತ್ತಡ ಹೇರುವುದು, ಬಿಎಲ್‌ಒ ಸೇರಿದಂತೆ ಇಲಾಖೇತರ ಕೆಲಸಗಳನ್ನು ನೀಡುವುದು ನೌಕರರ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜು.10ರಂದು ರಾಜ್ಯಾದ್ಯಂತ ಕಪ್ಪು ದಿನ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.