ಹೆಚ್ಚಿದ ಸಿಎಚ್ ಪೌಡರ್ ಮಾರಾಟ

ಅಕ್ರಮ ಅಡ್ಡೆಮೇಲೆ ಪೊಲೀಸ್ ದಾಳಿ
ಅಕ್ರಮ ಅಡ್ಡೆಮೇಲೆ ಪೊಲೀಸ್ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷದಲ್ಲಿನ 12 ಜನರ ಗಡಿಪಾರು
  • 4 ತಿಂಗಳಲ್ಲಿ 28 ಪ್ರಕರಣ ದಾಖಲು
  • ಜಿಲ್ಲೆಗೆ ರೆಲ್ವೆ ಮಾರ್ಗ, ರಸ್ತೆ ಮಾರ್ಗದ ಮೂಲಕವೇ ಹೆಚ್ಚಾಗಿ ಸಿಎಚ್ ಪೌಡರ್ ಹಾಗೂ ಸೇಂದಿ ಪೂರೆಕೆಯಾಗುತ್ತಿದೆ
ರಾಯಚೂರು 
ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು, ಇದರ ಬೆನ್ನಲ್ಲೆ  ಜಿಲ್ಲೆಯಲ್ಲಿ ಅಕ್ರಮ ಸೇಂದಿ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಪಕ್ಕದ ತೆಲಂಗಾಣ ರಾಜ್ಯದಿಂದ ರೈಲುಗಳ ಮೂಲಕ ಸಿ.ಎಚ್‌ಪೌಡರ್ ಮಿಶ್ರೀತ ಸೇಂದಿ ತಂದು ನಿರಂತರವಾಗಿ ನಗರ ಸೇರಿದಂತೆ ಜಿಲ್ಲಾಧ್ಯಂತ ಮಾರಾಟ ಮಾಡಲಾಗುತ್ತಿದೆ.
 ರಾಯಚೂರು ನಗರದ ಎಲ್ಬಿಎಸ್ ನಗರ, ಸಿಯತಲಾಬ್, ಹರಿಜನವಾಡ, ಮಡ್ಡಿಪೇಟೆ, ರಾಗಿಮಾನಗುಡ್ಡ, ಗದ್ವಾಲ್ ರಸ್ತೆ ಸೇರಿದಂತೆ ಅನೇಕ ಕೊಳಗೇರಿ ಬಡಾವಣೆಯಲ್ಲಿ ಯುವಕರು, ವಯೋವೃದ್ಧರು ಕಲುಷಿತ ಸೇಂದಿ ಸೇವನೆ ಮಾಡಿ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ.

ಒಂದು ಲೀಟರ್ ಸೇಂದಿಗೆ ಕೇವಲ 10 ರಿಂದ 30 ರೂಪಾಯಿ ಮಾತ್ರ ಇದ್ದರು, ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಮಧ್ಯ ವ್ಯಸನಿಗಳು ಹೆಚ್ಚಿನ ದರ ನೀಡದೇ ಈ ಕಡಿಮೆ ದರದ ಸೇಂದಿ ಸೇವನೆ ಮಾಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ಹಾಗೂ ಅಬಕಾರಿ ಇಲಾಖೆ ನಿತ್ಯ ಒಂದಲ್ಲ ಒಂದು ಪ್ರಕರಣ ದಾಖಲು ಮಾಡಿದರೆ ನಿಯಂತ್ರಣ ವಾಗುತ್ತಿಲ್ಲ. ಈ ಜಾಲ ಮಾತ್ರ ನಾಯಿಕೊಡೆಗಳಂತೆ ತನ್ನ ಅಟ್ಟಹಾಸ ಮೆರೆಯುತ್ತಿದೆ.

ಎಲ್ಲಿಂದ ಬರಲಿದೆ ಸೇಂದಿ ?
ಜಿಲ್ಲೆಗೆ ರೆಲ್ವೆ ಮಾರ್ಗ, ರಸ್ತೆ ಮಾರ್ಗದ ಮೂಲಕವೇ ಹೆಚ್ಚಾಗಿ ಸಿಎಚ್ ಪೌಡರ್ ಹಾಗೂ ಸೇಂದಿ ಪೂರೆಕೆಯಾಗುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಸೇಂದಿ ಲೀಗಲ್ ಅಗಿ ನಡೆಯುತ್ತಿದೆ. ಇದೇ ಗಡಿ ಭಾಗಕ್ಕೆ ದುರುಳರು ಬೈಕ್, ಆಟೋಗಳ ಮೂಲಕವೂ ಸೇಂದಿ ರಾಯಚೂರಿಗೆ ತಲುಪಿಸುತ್ತಾರೆ. ಅಲ್ಲಿಂದ ತರಲಾಗುವ ಸೇಂದಿಗೆ ನಿಷೇಧಿತ ಸಿಎಚ್ ಪೌಡರ್ ಮಿಕ್ಸೃ್ ಮಾಡಲಾಗುತ್ತೆ. ಈ ಮೂಲಕ ಸೇಂದಿ ಪ್ರಮಾಣವನ್ನು ಹೆಚ್ಚಿಗೆ ಮಾಡಿ ಮಧ್ಯ ವ್ಯಸನಕ್ಕೆ ದಾಸರಾಗಿರುವ ಕೂಲಿ ಕಾರ್ಮಿಕರು, ರೈತರು, ಗೂಳೆ ಹೋಗುವ ಬಡ ಜನರನ್ನು ಸೆಳೆಯಲಾಗುತ್ತೆ. ಒಂದು ಕೆಜಿ ಸಿಎಚ್ ಪೌಡರ್‌ಗೆ ಎರಡು ವರೆಯಿಂದ ಮೂರು ಸಾವಿರ ಕೊಟ್ಟು ಆಂದ್ರ, ತೆಲಂಗಾಣದಲ್ಲಿ ಖರೀದಿಸಲಾಗುತ್ತೆ. ಒಂದು ಕೆಜಿ ಸಿಎಚ್ ಪೌಡರ್‌ನಿಂದ ಸುಮಾರು 3 ಸಾವಿರ ಲೀಟರ್‌ಗೂ ಹೆಚ್ಚು ಸೇಂದಿ ತಯಾರಿಸಬಹುದು. ಹೀಗಾಗಿ ನಿಷೇಧಿತ ಸಿಎಚ್ ಪೌಡರ್ ನಿಂದ ತಯಾರಿಸಲಾಗುವ ಸೇಂದಿ ದಂಧೆ ನಡೆಯುತ್ತಿದೆ.



ಎಷ್ಟು ಪ್ರಕರಣ ದಾಖಲು
ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರತರವಾಗಿ ಆಕ್ರಮ ಮದ್ಯ ಮಾರಾಟ, ಸಿಎಚ್ ಪೌಡರ್ ಮಿಶ್ರೀತ ಸೇರಿ ಮಾರಾಟ ಕುರಿತು ರಾಯಚೂರು ಉಪ ವಿಭಾಗದ ಡಿವೈಎಸ್ಪಿ ಶಾಂತವೀರ ಈ. ನೇತೃತ್ವದಲ್ಲಿ ನಿರಂತರವಾಗಿ ದಾಳಿ ಮಾಡಲಾಗುತ್ತಿದ್ದು,  ಕಳೆದ ಜನವರಿ 01 ರಿಂದ ಏಪ್ರಿಲ್ 30ರವರೆಗೆ ಒಟ್ಟು  28 ಪ್ರಕರಣಗಳನ್ನು ದಾಖಲು ಮಾಡಿ,34 ಜನ ಆರೋಪಿಗಳಿಗಳಿಂದ 32200 ರೂ. ಬೆಲೆ ಬಾಳುವ 1315 ಲೀ. ಸೇಂದಿಯನ್ನು ಇಲಾಖೆ ಜಪ್ತಿ ಮಾಡಲಾಗಿದೆ.


ಎರಡು ವರ್ಷದಲ್ಲಿ 12 ಜನರ ಗಡಿಪಾರು
2025 ಹಾಗು 26 ನೇ ಸಾಲಿನಲ್ಲಿ ನೇ ಸಾಲಿನಲ್ಲಿ  ಅಕ್ರಮ ಚಟುವಟಿಕೆಗಳಾದ ಕೊಲೆ, ಮಟ್ಕಾಜೂಜು,ಅಕ್ರಮ ಮರಳು ಸಾಗಾಣಿಕೆ, ಸೇದಿ ಮಾರಟಾಹಾಗೂ ಇತರೆ ಪ್ರಕರಣಗಳಲ್ಲಿ ಪದೇ ಪದೆ ಭಾಗಿಯಾದ ವಿವಿಧ ಠಾಣೆಗಳ 12 ಜನರನ್ನು ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಮಾಡಲಾಗಿತ್ತು. ರಾಯಚೂರಿನ ಪಶ್ಚಿಮ ಠಾಣೆಯಿಂದ 1, ನೇತಾಜಿನಗರದಿಂದ 2, ಇಡಪನೂರಿನಿಂದ 5, ಯಾಪಲದಿನ್ನಿಯಿಂದ 2  ಹಾಗೂ ಅಬಕಾರಿ ಇಲಾಖೆಯಿಂದ ಇಬ್ಬರು ಸೇರಿ ಒಟ್ಟು 12 ಜನರನ್ನು  ಜಿಲ್ಲೆಯಿಂದ ಗಡಿಪಾರು ಮಾಡಿದ್ದರು.


ಎಸ್ಪಿ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ರಾಯಚೂರು ಉಪ ವಿಭಾಗ ಸೇರಿ ಅನೇಕ ಕಡೆ ನಿರಂತರವಾಗಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಸಿಎಚ್ ಪೌಡರ್ ಮಿಶ್ರೀತ ಸೇರಿ ಮಾರಾಟ ಅಡ್ಡೆಯ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಇದರ ಜತೆಗೆ ಪಕ್ಕದ ತೆಲಂಗಾಣ ರಾಜ್ಯ ಪೊಲೀಸ್ 

ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ.
ಶಾಂತವೀರ ಈ. ಡಿವೈಎಸ್ಪಿ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net