ಖಾತ್ರಿ ಮಾನವ ದಿನಗಳು 200ಕ್ಕೆ ಹೆಚ್ಚಿಸಿ

ಸಾಲಗುಂದ ಗ್ರಾಮದಲ್ಲಿ ಪಿಡಿಒ ವೀರಭದ್ರಪ್ಪಗೆ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ಸಾಲಗುಂದ ಗ್ರಾಮ ಸಮಿತಿ ಮನವಿ ಸಲ್ಲಿಸಿತು.
ಸಾಲಗುಂದ ಗ್ರಾಮದಲ್ಲಿ ಪಿಡಿಒ ವೀರಭದ್ರಪ್ಪಗೆ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ಸಾಲಗುಂದ ಗ್ರಾಮ ಸಮಿತಿ ಮನವಿ ಸಲ್ಲಿಸಿತು.
Published on
ಸಿಂಧನೂರು: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ), ಸಾಲಗುಂದ ಗ್ರಾಮ ಸಮಿತಿ ಶುಕ್ರವಾರ ಪಿಡಿಒ ವೀರಭದ್ರಪ್ಪಗೆ ಮನವಿ ಸಲ್ಲಿಸಿತು. 
ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎರಡನೆ ಬೆಳೆ ಇಲ್ಲದಿರುವುದರಿಂದ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಈಗಿರುವ 370 ರೂ. ಕೂಲಿ ಮೊತ್ತವನ್ನು 700 ರೂ.ಗೆ ಹೆಚ್ಚಿಸಬೇಕು. ಅರ್ಹ ಫಲಾನುಭವಿಗಳಿಗೆ ನಿವೇಶನ, ವಸತಿ ಸೌಕರ್ಯ ಒದಗಿಸಬೇಕು. 
ಆಸ್ಪತ್ರೆಗೆ ಕಾಯಂ ವೈದ್ಯರ ನೇಮಿಸಬೇಕು. ಚರಂಡಿ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು. ಸಮರ್ಪಕ ನೀರು ಪೂರೈಕೆಗೆ ಪೈಪ್‌ಲೈನ್ ಕಾರ್ಯ ಮಾಡಬೇಕು. ಮಹಿಳಾ ಶೌಚಗೃಹ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. 
ಸಮಿತಿ ಕಾರ್ಯದರ್ಶಿ ಗರೀಬ್‌ಸಾಬ್, ಗೇಸುದರಾಜ, ಹಳ್ಳಪ್ಪ, ವಾಜಿದ್, ರಾಮಚಂದ್ರ ಹಡಪದ, ಸಂಜೀವ, ಕಾಸೀಂಬಿ, ಲಲಿತಮ್ಮ, ಶೇಖರಮ್ಮ, ಕಮಲಾಕ್ಷ, ಮೌಲಾಸಾಬ್ ದಿವಾನ್ ಇದ್ದರು. 
ಫೋಟೊ23ಎಸ್‌ಎನ್‌ಡಿ-03
ಸಾಲಗುಂದ ಗ್ರಾಮದಲ್ಲಿ ಪಿಡಿಒ ವೀರಭದ್ರಪ್ಪಗೆ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ) ಸಾಲಗುಂದ ಗ್ರಾಮ ಸಮಿತಿ ಮನವಿ ಸಲ್ಲಿಸಿತು. ಸಮಿತಿ ಕಾರ್ಯದರ್ಶಿ ಗರೀಬ್‌ಸಾಬ್, ಗೇಸುದರಾಜ, ಹಳ್ಳಪ್ಪ, ವಾಜಿದ್, ರಾಮಚಂದ್ರ ಹಡಪದ, ಲಲಿತಮ್ಮ, ಶೇಖರಮ್ಮ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net