ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿ

 ಮಸ್ಕಿಯ ಶ್ರೀಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ಯೋಗ ಶಿಬಿರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಿದರು.
ಮಸ್ಕಿಯ ಶ್ರೀಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ಯೋಗ ಶಿಬಿರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಿದರು.
Published on
ಮಸ್ಕಿ: ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕೆಂದರೆ ನಿತ್ಯ ಯೋಗ ಮಾಡಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. 
ಯೋಗ ದಿನಾಚರಣೆ ನಿಮಿತ್ತ ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನ ಆವರಣದಲ್ಲಿ ಸೋಮವಾರ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿರುವ 6 ದಿನಗಳ ಉಚಿತ ಯೋಗ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
 ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ, ಯೋಗ ಸಾಧನೆ ಭಾರತೀಯ ಪರಂಪರೆಯಾಗಿದ್ದು, ಆರೋಗ್ಯವಂತರಾಗಲು ಔಷಧ ರಹಿತ ಯೋಗ ಮತ್ತು ಆಸನಗಳಿಂದ ಮಾತ್ರ ಸಾಧ್ಯ. ಬಾಲ್ಯದಿಂದಲೇ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಬೇಕು ಎಂದರು. 
ಉದ್ಯಮಿ ಪ್ರಕಾಶ ಧಾರಿವಾಲ, ಯೋಗ ಗುರು ಆನಂದ ಪತ್ತಾರ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಸುಕಮುನಿಯಪ್ಪ ನಾಯಕ, ಪತಂಜಲಿ ಮಹಿಳಾ ಸಮಿತಿ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಅಮರೇಶ ಬ್ಯಾಳಿ, ಶಿವರಾಜ ಯಂಬಲದ, ವೀರೇಶ ಹಿರೇಮಠ ಇದ್ದರು. ಶ್ರೀಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್, ಪತಂಜಲಿ ಯೋಗ ಸಮಿತಿ, ಪರಮಹಂಸ ಆಶ್ರಮ, ಲಯನ್ಸ್ ಕ್ಲಬ್, ಆರ್‌ಎಸ್‌ಎಸ್, ಓಂ ಶಿವಂ ಸೌಹಾರ್ದ ಸಹಕಾರಿ ಸಂಘ, ಎಂಪೈರ್ ಮಲ್ಟಿಜಿಮ್ ಸ್ಪೋರ್ಟ್ಸ ಕ್ಲಬ್ ಸಹಯೋಗದಲ್ಲಿ ಯೋಗ ಶಿಬಿರ ಹಮ್ಮಿಕೊಳ್ಳಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net