ಪಿಡಿಒಗಳ ರಕ್ಷಣೆಗಾಗಿ ವಿಶೇಷ ರಕ್ಷಣಾ ನೀತಿ ಜಾರಿಗೊಳಿಸಬೇಕು. ಪಿಡಿಒ ಮುಕ್ತುಂಹುಸೇನ ಸಾವಿನ ತನಿಖೆಗೆ ಸಿಬಿಐ, ಎಸ್‌ಐಟಿಗೆ ವಹಿಸಿ ಸತ್ಯಾಂಶ ಹೊರತರಬೇಕು. ಮೃತ ಅಧಿಕಾರಿಗಳ ಕುಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ವಿಶೇಷ ಆರ್ಥಿಕ ನೆರವು ಮತ್ತು ಅನುಕಂಪದ ನೇಮಕಾತಿ ಒದಗಿಸಲು ರಾಜ್ಯ ಆರ್‌ಡಿಪಿಆರ್ ನಿಧಿ ಸ್ಥಾಪಿಸಬೇಕು. 14 ವರ್ಷಗಳಿಂದ ಬಾಕಿ ಇರುವ ಬಡ್ತಿಯನ್ನು ತಕ್ಷಣ ಪೂರೈಸಿ, ಕೆಲಸದ ಒತ್ತಡ ಕಡಿಮೆ ಮಾಡಲು ಸಮಿತಿ ರಚಿಸಿ ವರದಿ ಪಡೆಯಬೇಕೆಂದು ಆಗ್ರಹಿಸಿದರು.