ತೀವ್ರ ತಾಪಮಾನ ಇರುವುದರಿಂದ ಸಾರ್ವಜನಿಕರಲ್ಲಿ ಸನ್‌ಸ್ಟ್ರೋಕ್, ನಿರ್ಜಲೀಕರಣ, ಶೀತ ಸಂಬಂಧಿತ ರೋಗಗಳು ಬರುತ್ತಿವೆ. ತೀವ್ರವಾದ ಶಾಖದ ಸಮಯದಲ್ಲಿ ಹೀಟ್‌ಸ್ಟ್ರೋಕ್ ಹೆಚ್ಚಾಗಿ ಕಂಡಬರುತ್ತಿದೆ. ಹೀಗಾಗಿ ಮಕ್ಕಳು ಸೇರಿ ಎಲ್ಲ ವಯಸ್ಸಿನವರಿಗೆ ಉಷ್ಣ ಸಂಬಂಧಿತ ರೋಗ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲು ಆರು ಹಾಸಿಗೆಯುಳ್ಳ ವಾರ್ಡ್ ಆರಂಭಿಸಲಾಗಿದೆ.