2024ರ ಸೆ.5 ರಂದು ರಸ್ತೆ ಗುಂಡಿಯ ಕಾರಣ ರಾಯಚೂರು ಸಿಂಧನೂರು ರಸ್ತೆಯಲ್ಲಿ ಭೀಕರ ಅಪಘಾತವಾಗಿ, ಮಕ್ಕಳು ಸಾವನಪ್ಪಿದ್ದರು. ಈ ಬಗ್ಗೆ ಯಾವ ಕ್ರಮವಾಗಿದೆ ಎಂದು ಆಯೋಗ ಮಾಹಿತಿ ಕೇಳಿದ್ದು, ಪಿಡಬ್ಲೂಡಿ ಇಲಾಖೆಯಿಂದ 2022 ರಲ್ಲಿಯೇ ರಸ್ತೆ ಕೆಆರ್‌ಡಿಎಲ್ಗೆ ಹಸ್ತಾಂತರಿಸಲಾಗಿದ್ದು, ಈ ಅಪಘಾತ ರಸ್ತೆಯ ಕಾರಣದಿಂದಲ್ಲ, ಚಾಲಕನ ನಿರ್ಲಕ್ಷ್ಯತನದಿಂದ ಆಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.