

ಪ್ರಮುಖ ಮುಖ್ಯಾಂಶಗಳು
ವಾಣಿಜ್ಯ ಉದ್ದೇಶಿತ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್ ಬಂದ್ ಮಾಡುವ ಸ್ಥಿತಿಯಲ್ಲಿದ್ದೇವೆ. ಜೊತೆಗೆ 30 ರಿಂದ 40 ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು ಹೋಟೆಲ್ ನಡೆಸುವುದು ಕಷ್ಟವಾಗುತ್ತದೆ. ಕೂಡಲೇ ಸಿಲಿಂಡರ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಎರಡು ದಿನಗಳಲ್ಲಿ ಸಿಲಿಂಡರ್ ಸಿಗದಿದ್ದರೆ ಹೋಟೆಲ್ ಮುಚ್ಚುವ ಪರಿಸ್ಥಿತಿ ಬರುತ್ತದೆ.
ವಾಣಿಜ್ಯ ಉದ್ದೇಶಿತ ಸಿಲಿಂಡರ್ ಪೂರೈಕೆ ಮಾ.9ರಿಂದ ಸ್ಥಗಿತಗೊಳಿಸಲಾಗಿದೆ. ಗೃಹ ಬಳಕೆದಾರರು ಇಂದು ಬುಕ್ಕಿಂಗ್ ಮಾಡಿದರೆ 21 ದಿನಗಳ ನಂತರ ಲಭ್ಯವಾಗಲಿದೆ. ಸ್ವಲ್ಪ ಗೊಂದಲ ಉಂಟಾಗಿದ್ದು ನಿಜ.
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಗೃಹ ಬಳಕೆ ಸಿಲಿಂಡರ್‌ಗಳಿಗೆ ಯಾವುದೇ ತೊಂದರೆ ಇಲ್ಲ. ಗೃಹ ಬಳಕೆಯ 15000 ಹಾಗೂ ವಾಣಿಜ್ಯ ಬಳಕೆಯ 1500 ಸಿಲಿಂಡರ್‌ಗಳನ್ನು ಪ್ರತಿ ತಿಂಗಳು ಪೂರೈಕೆ ಮಾಡಲಾಗುತ್ತಿದೆ. ಮೊದಲು ಬುಕ್ಕಿಂಗ್ ಮಾಡಲು 21 ದಿನ ನಿಗದಿಯಾಗಿತ್ತು. ಈಗ 25 ದಿನಗಳ ನಂತರ ಗೃಹ ಬಳಕೆ ಸಿಲಿಂಡರ್ ಪಡೆಯಬಹುದು.