ಬಿಇಒ ರಾಧಾಬಾಯಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಪ್ರಭು ಕಾನನ್, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಅಕ್ಷರ ದಾಸೋಹ ತಾಲೂಕು ಅಧಿಕಾರಿ ಬಸವರಾಜ ಕಟ್ಟಿಮನಿ, ಗ್ರಾಪಂ ಆಡಳಿತಾಧಿಕಾರಿ ಹಾಗೂ ಸಿಡಿಪಿಒ ಮಹೇಶ, ಪಿಡಿಒ ಕಟ್ಟೆಪ್ಪ, ಪಿಎಸ್‌ಐ ವೈಶಾಲಿ ಝಳಕಿ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಡುಗೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ ಹಿನ್ನೆಲೆಯಲ್ಲಿ, ಅಡುಗೆ ಸಿಬ್ಬಂದಿ ದೇವಮ್ಮ ಹನುಮಂತರಾಯ, ರಾಜಮ್ಮ ರಂಗಪ್ಪ, ಭಾರತಿ ಜಗನ್ನಾಥ, ಶಂಕ್ರಮ್ಮ ಬಾಲಪ್ಪ, ಚಂದಮ್ಮ ಬಸವರಾಜ ಹಾಗೂ ಶಿವಕಾಂತ ಆಂಜನೇಯ ಅವರನ್ನು ವಜಾಗೊಳಿಸಿ ಗ್ರಾಪಂ ಠರಾವ್ ಪಾಸ್ ಮಾಡಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೊಸ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.