ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷೆ

ಕವಿತಾಳ ಸಮೀಪದ ಹಾಲಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 10ನೇ ತರಗತಿ ಪರೀಕ್ಷೆ ಕೇಂದ್ರಕ್ಕೆ ಮಾನ್ವಿ ಕ್ಷೇತ್ರ ಶಿಕ್ಷಣಧಿಕಾರಿ ಚಂದ್ರಶೇಖರ ದೊಡ್ಡಮನಿ ಭೇಟಿನೀಡಿ ಪರಿಶೀಲಿಸಿದರು. ಪರೀಕ್ಷೆ ಮುಖ್ಯ ಅಧಿಕ್ಷಕ ಸುಭಾಸ್ ಸಿಂಗ್, ವಟಗಲ್ ಮುರಾರ್ಜಿ ವಸತಿ ಶಾಲೆ ಮುಖ್ಯಶಿಕ್ಷಕ ಮಾಹಾಂತೇಶ, ಶಿಕ್ಷಕ ಬಸವರಾಜ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಈ ಬಾರಿ ಉತ್ತಮ ಫಲಿತಾಂಶ

ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷೆ

ಕವಿತಾಳ: ಈ ಸಾಲಿನ 10ನೇ ತರಗತಿ ಫಲಿತಾಂಶ ಉತ್ತಮವಾಗಿತ್ತದೆ ಎಂದು ಮಾನ್ವಿ ಕ್ಷೇತ್ರ ಶಿಕ್ಷಣಧಿಕಾರಿ ಚಂದ್ರಶೇಖರ ದೊಡ್ಡಮನಿ ಹೇಳಿದರು.
ಸಮೀಪದ ಹಾಲಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 10ನೇ ತರಗತಿ ಇಂಗ್ಲಿಷ್ ಪರೀಕ್ಷೆ ವ್ಯವಸ್ಥೆ ವೀಕ್ಷಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಬೇಗನೆ ಸ್ಪಂದಿಸಬೇಕು ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಫಲಿತಾಂಶದಲ್ಲಿ ಹಿನ್ನಡೆಯಾಗಿತ್ತು. ಈ ಸಲ ಉತ್ತಮ ಪಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪರೀಕ್ಷೆ ಮುಖ್ಯ ಅಧಿಕ್ಷಕ ಸುಭಾಸ್ ಸಿಂಗ್, ವಟಗಲ್ ಮುರಾರ್ಜಿ ವಸತಿ ಶಾಲೆ ಮುಖ್ಯಶಿಕ್ಷಕ ಮಾಹಾಂತೇಶ, ಶಿಕ್ಷಕ ಬಸವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net