ಮರ್ಯಾದೆಗೇಡು ಹತ್ಯೆ ಆರೋಪಿಗಳ ಬಂಧಿಸಿ

ಮಾನ್ವಿಯಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು.
ಮಾನ್ವಿಯಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು.
Published on
ಮಾನ್ವಿ: ಹುಬ್ಬಳ್ಳಿ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮರ್ಯಾದೆಗೇಡು ಹತ್ಯೆ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
ದಲಿತ ಸಮುದಾಯದ ಯುವಕನ ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಮಾನ್ಯಾ ಪಾಟೀಲ್ ಮೇಲೆ ಯುವತಿ ಕುಟುಂಬಸ್ಥರು ಹಲ್ಲೆ ನಡೆಸಿ ಕೊಲೆ ಮಾಡಿದ್ದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಮರ್ಯಾದೆಗೇಡು ಹತ್ಯೆಗೈದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 
ರಾಜ್ಯ ಸಮಿತಿಯ ಚಂದ್ರಕಾಂತ ಎನ್. ಕದ್ರೋಳಿ, ಜಿಲ್ಲಾಧ್ಯಕ್ಷ ಅಬ್ರಾಹಂ ಪನ್ನೂರು, ತಾಲೂಕು ಅಧ್ಯಕ್ಷ ಸದಾನಂದ ಪನ್ನೂರು, ವಸಂತ ಕೊಟ್ನೆಕಲ್, ರವೀಂದ್ರ ಜಾನೇಕಲ್, ರಾಜಕುಮಾರ ಕುರ್ಡಿ, ಹನುಮಂತ ಕೊಟ್ನೆಕಲ್, ಬಸವರಾಜ ಬಲ್ಲಟಗಿ, ಸ್ವಾಮಿದಾಸ ಕುರ್ಡಿ, ಬಸವರಾಜ, ವೆಂಕಟೇಶ್ ಇತರರಿದ್ದರು.  .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net