ಕೃಷಿ ವಿವಿಯ ಅವೈಜ್ಞಾನಿಕ ನೇಮಕಾತಿ ರದ್ದತಿಗೆ ಒತ್ತಾಯಿಸಿ ಹೆದ್ದಾರಿ ತಡೆ

ಕೃಷಿ ಇಲಾಖೆಯಲ್ಲಿನ ಅವೈಜ್ಞಾನಿಕ ನೇಮಕಾತಿ ಕ್ರಮಗಳನ್ನು ರದ್ದುಪಡಿಸುವುದು, ಕೃಷಿ ಶಿಕ್ಷಣದ ಖಾಸಗಿಕರಣ ತಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ  ಸೋಮವಾರ ರಾಜ್ಯದ ಕೃಷಿ ವಿದ್ಯಾರ್ಥಿಗಳು ಹಾಗೂ ಕೃಷಿ ಪದವೀಧರರು ರಾಯಚೂರಿನ ಕೃಷಿ ವಿವಿಯ ಹತ್ತಿರದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಪ್ರಮುಖರಾದ  ಚಾಮರಸ ಮಾಲೀಪಾಟೀಲ್, ನಾಗರತ್ನ ವಿ.ಪಾಟೀಲ್, ಹರವಿ ಶಂಕರಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ. ಪ್ರಭಾಕರ್ ಪಾಟೀಲ್, ಸೂಗುರಯ್ಯ ಹಿರೆಮಠ, ವಿದ್ಯಾರ್ಥಿಗಳಾದ ಶಿವಪ್ಪ, ಅಂಕೇಶ, ನರ್ಮದಾ, ಜ್ಯೋತಿ ಇದ್ದರು.
ಕೃಷಿ ಇಲಾಖೆಯಲ್ಲಿನ ಅವೈಜ್ಞಾನಿಕ ನೇಮಕಾತಿ ಕ್ರಮಗಳನ್ನು ರದ್ದುಪಡಿಸುವುದು, ಕೃಷಿ ಶಿಕ್ಷಣದ ಖಾಸಗಿಕರಣ ತಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರಾಜ್ಯದ ಕೃಷಿ ವಿದ್ಯಾರ್ಥಿಗಳು ಹಾಗೂ ಕೃಷಿ ಪದವೀಧರರು ರಾಯಚೂರಿನ ಕೃಷಿ ವಿವಿಯ ಹತ್ತಿರದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಪ್ರಮುಖರಾದ ಚಾಮರಸ ಮಾಲೀಪಾಟೀಲ್, ನಾಗರತ್ನ ವಿ.ಪಾಟೀಲ್, ಹರವಿ ಶಂಕರಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ. ಪ್ರಭಾಕರ್ ಪಾಟೀಲ್, ಸೂಗುರಯ್ಯ ಹಿರೆಮಠ, ವಿದ್ಯಾರ್ಥಿಗಳಾದ ಶಿವಪ್ಪ, ಅಂಕೇಶ, ನರ್ಮದಾ, ಜ್ಯೋತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಪ್ರತಿಭಟನೆಗೆ ರೈತ ಸಂಘ ಸಾಥ್
ರಾಯಚೂರು ಕೃಷಿ ಇಲಾಖೆಯಲ್ಲಿನ ಅವೈಜ್ಞಾನಿಕ ನೇಮಕಾತಿ ಕ್ರಮಗಳನ್ನು ರದ್ದುಪಡಿಸುವುದು, ಕೃಷಿ ಶಿಕ್ಷಣದ ಖಾಸಗಿಕರಣ ತಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರಾಜ್ಯದ ಕೃಷಿ ವಿದ್ಯಾರ್ಥಿಗಳು ಹಾಗೂ ಕೃಷಿ ಪದವೀಧರರು ನಗರದ ಕೃಷಿ ವಿವಿಯ ಹತ್ತಿರದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲ ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರೈತರ ಹಿತಕ್ಕಾಗಿ ಶ್ರಮಿಸುತ್ತಿದ್ದರೂ, ಕೃಷಿ ಇಲಾಖೆಯ ರೈತ ವಿರೋಧಿ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಗಳಿಂದ ಕೃಷಿ ಕ್ಷೇತ್ರ ಮತ್ತು ಕೃಷಿ ಶಿಕ್ಷಣ ಸಂಕಷ್ಟಕ್ಕೆ ಸಿಲುಕಿದೆ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದಾಗಿ ತಿಳಿಸಿದರು.
ಪ್ರತಿಭಟನಾಕಾರರು ಮೊದಲನೆಯದಾಗಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೇ ತಿಂಗಳು ನಡೆಯಲಿರುವ ಕೆಇಎ ಪರೀಕ್ಷೆಯಲ್ಲಿ ಕೊನೆಯ ಕ್ಷಣದಲ್ಲಿ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿರುವುದನ್ನು ತೀವ್ರ ವಾಗಿ ಖಂಡಿಸಿದರು.
2025ರ ಏಪ್ರಿಲ್ 10ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅರ್ಹತಾ ಮಾನದಂಡಗಳನ್ನು ಬದಲಾಯಿಸಲು ಅವಕಾಶವಿಲ್ಲ. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವಿಶ್ವವಿದ್ಯಾ ಲಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ತಕ್ಷಣವೇ ಆ ಅವಕಾಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಖಾಸಗಿ ಕೃಷಿ ಕಾಲೇಜುಗಳಿಗೆ ನೀಡಲಾಗುತ್ತಿರುವ ಸಂಯೋಜನೆ (ಅಫಿಲಿಯೇಷನ್) ತಕ್ಷಣವೇ ನಿಲ್ಲಿಸಬೇಕು.ಖಾಸಗಿ ಕಾಲೇಜುಗಳಿಗೆ ಅವಕಾಶ ನೀಡುವುದರಿಂದ ಕೃಷಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ಬಡ ರೈತರ ಮಕ್ಕಳಿಗೆ ಕೃಷಿ ಶಿಕ್ಷಣ ದುಬಾರಿಯಾಗಲಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಪ್ರವೇಶಾತಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಯ ಎಒ ಮತ್ತು ಎಎಒ ಹುದ್ದೆಗಳಿಗೆ ಬಿ.ಇ. ಬಯೋಟೆಕ್ನಾಲಜಿ ಪದವೀಧರರಿಗೆ ಅವಕಾಶ ನೀಡಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೃಷಿ ವಿಷಯದ ಪ್ರಾಯೋಗಿಕ ಜ್ಞಾನವಿಲ್ಲದವರಿಗೆ ಕೃಷಿ ಇಲಾಖೆಯ ಜವಾಬ್ದಾರಿಯುತ ಹುದ್ದೆಗಳನ್ನು ನೀಡುವುದು ರೈತರಿಗೆ ಹಾನಿಕಾರಕವಾಗಿ ದ್ದು, ಈ ನಿರ್ಧಾರವನ್ನು ತಕ್ಷಣ ಹಿಂಪಡೆದು ಬಿ.ಇ. ಬಯೋಟೆಕ್ ಪದವೀಧರರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ವಾಹನಗಳ ಸಂಚಾರವನ್ನು ಸುಗಮಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚಾಮರಸ ಮಾಲೀಪಾಟೀಲ್, ನಾಗರತ್ನ ವಿ.ಪಾಟೀಲ್, ಹರವಿ ಶಂಕರಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ. ಪ್ರಭಾಕರ್ ಪಾಟೀಲ್, ಸೂಗುರಯ್ಯ ಹಿರೆಮಠ, ವಿದ್ಯಾರ್ಥಿಗಳಾದ ಶಿವಪ್ಪ, ಅಂಕೇಶ, ನರ್ಮದಾ, ಜ್ಯೋತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net