ತಂತ್ರಜ್ಞಾನ ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ

ಲಿಂಗಸುಗೂರು ತಾಲೂಕಿನ ಬ್ಯಾಲಿಹಾಳ ಗ್ರಾಮದ ತೋಟಗಾರಿಕೆ ಜಮೀನಿನಲ್ಲಿ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಏರ್ಪಡಿಸಲಾಗಿತ್ತು. ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಬಾಪುರಾಯಗೌಡ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀಶೈಲ ವಾಘಮೋರೆ, ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ, ಡಾ.ರೇಣುಕಾ, ಪ್ರಗತಿಪರ ರೈತ ರೇವಣಸಿದ್ದ ಬ್ಯಾಲಿಹಾಳ, ಕನಕಪ್ಪ, ಸೋಮೇಶ ರಾಮತ್ನಾಳ ಇತರರಿದ್ದರು.

Published on
ಲಿಂಗಸುಗೂರು: ಈರುಳ್ಳಿ ಬೆಳೆಯಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ಬೀಜ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಾಪುರಾಯಗೌಡ ಹೇಳಿದರು.
ಬ್ಯಾಲಿಹಾಳ ಗ್ರಾಮದ ತೋಟಗಾರಿಕಾ ಇಲಾಖೆಯ ಜಮೀನಿನಲ್ಲಿ ಗುರುವಾರ ತೋಟಗಾರಿಕೆ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಾಗೂ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀಜ ಘಟಕ ಬಾಗಲಕೋಟ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಈರುಳ್ಳಿ ಬೀಜೋತ್ಪಾದನಾ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ಸಂಶೋಧನೆ ಕೇಂದ್ರಗಳಿಂದ ಬಿತ್ತನೆ ಬೀಜ ದೊರಕುವುದರಿಂದ ಇಳುವರಿ ಹೆಚ್ಚಾಗುತ್ತದೆ. ರೈತರು ಗುಣಮಟ್ಟದ ಉತ್ತಮ ತಳಿಯ ಬೀಜಗಳನ್ನೇ ಬಳಸಬೇಕು. ಪ್ರಥಮವಾಗಿ ಈ ಭಾಗದಲ್ಲಿ ಬೀಜೋತ್ಪಾದನೆ ಮಾಡಲು ಅವಕಾಶ ಮಾಡಿದ್ದೇವೆ. ತೋಟಗಾರಿಕೆ ಇಲಾಖೆಯಿಂದ ಒಳ್ಳೆಯ ಬೀಜೋತ್ಪಾದನೆ ಮಾಡಲಾಗುತ್ತಿದೆ. ಬೀಜೋತ್ಪಾದನೆ ಹೇಗೆ ಮಾಡಬೇಕು. ಯಾವ ರೀತಿ ಮಾಡಿದರೆ ಆದಾಯ ಬರುತ್ತದೆ ಎಂದು ರೈತರು ಯಾವುದೇ ಸಮಯದಲ್ಲಿ ಸಲಹೆ ಕೇಳಿದರೆ ಸ್ಪಂದಿಸಲಾಗುವುದು ಎಂದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀಶೈಲ ವಾಘಮೋರೆ ಮಾತನಾಡಿ, ಈ ಭಾಗದಲ್ಲಿ ಜೇನುಹುಳು ಹೆಚ್ಚಾಗಿವೆ. ಅವುಗಳ ಪರಾಗಸ್ಪರ್ಷದಿಂದ ಸದೃಢ ಬೀಜೋತ್ಪಾದನೆಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ತೋಟದಲ್ಲಿ ಜೇನುಹುಳು ಸಾಕಣೆಗೆ ಆದ್ಯತೆ ನೀಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net