ಮರಳು ಅಕ್ರಮ ತಡೆಯುವಲ್ಲಿ ಗೃಹ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದ್ದು ಮರಳು ಸಾಗಣೆ ಕಾನೂನು ಬದ್ಧಗೊಳಿಸದಿದ್ದರೆ ದಂಧೆ ಹೆಚ್ಚಾಗಲಿದೆ. ಮರಳು ಕ್ವಾರಿಗೆ ಬಿಡ್ ಕರೆದಿದ್ದರೂ ತೆರೆಯಲು ಅನುಮತಿ ಯಾಕೆ ನೀಡಿಲ್ಲ. ಇದರಿಂದ ಸರ್ಕಾರದ ಖಜಾನೆಗೆ ನಷ್ಟವಾಗಲಿದೆ. ಕೃಷ್ಣಾ ನದಿ ಜಲಾನಯನ ಪ್ರದೇಶದಿಂದ ರಾತ್ರಿಯಿಡಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಧೂಳಿನಿಂದ ಬೆಳೆಗಳು ಹಾನಿಯಾಗುತ್ತಿವೆ ಎಂದು ರೈತರು ದೂರುತ್ತಾರೆ. ಮರಳು ರಕ್ಷಣೆ ವಿಶೇಷ ಕಾರ್ಯಪಡೆ ಹೆಸರಿಗೆ ಸೀಮಿತವಾಗಿದೆ. ಸಿಸಿ ಕ್ಯಾಮರಾ, ಚೆಕ್‌ಪೋಸ್ಟ್ ನಿಷ್ಕ್ರಿಯವಾಗಿವೆ. ಗಣಿಗಾರಿಕೆಯಿಂದ ಸಾವುಗಳ ಸಂಭವಿಸುತ್ತಿವೆ. ರಾಯಚೂರು ಜಿಲ್ಲೆಯ ಮಹಿಳಾ ಶಾಸಕಿಯೊಬ್ಬರು ತಮ್ಮ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿ, ಮರಳು ಮಾಫಿಯಾಗಳಿಂದ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ. ಮಾಫಿಯಾಗಳಿಂದ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಕ್ರಮಕೈಗೊಳ್ಳುವಲ್ಲಿ ಗೃಹ ಸಚಿವರು ಅಸಹಾಯಕರಾಗಿದ್ದು ಗಂಭೀರ ಸಮಸ್ಯೆ. ಇದಕ್ಕೆ ಕೇಂದ್ರ ಸಂಸ್ಥೆ ಅಥವಾ ವಿಶೇಷವಾಗಿ ರಚಿಸಲಾದ ತನಿಖಾ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.