ಶೌಚಗೃಹ ಇಲ್ಲದೆ ವಿದ್ಯಾರ್ಥಿನಿಯರು ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ತರಗತಿಗಳು ನಡೆಯುತ್ತಿದ್ದು, ಶೌಚಕ್ಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಬಾಲಕರು ತೆರೆಮರೆ, ಜಾಲಿಪೊದೆಗೆ ಹೋದರೆ ಬಾಲಕಿಯರ ಪರಿಸ್ಥಿತಿ ಹೇಳತೀರದು. ಬಸ್ ನಿಲ್ದಾಣದಲ್ಲಿನ ಶೌಚಗೃಹ ಹಲವು ವರ್ಷಗಳಿಂದ ಮುಚ್ಚಿದೆ. ಹಲವು ವಿದ್ಯಾರ್ಥಿನಿಯರು ಶೌಚಗೃಹ ಸಮಸ್ಯೆಯಿಂದಲೇ ಕಾಲೇಜು ಬಿಡುವ ಸ್ಥಿತಿ ಎದುರಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕಿದೆ.