

ಪ್ರಮುಖ ಮುಖ್ಯಾಂಶಗಳು
ಮುದಗಲ್: ಮಕ್ಕಳ ಕಲಿಕಾ ಗುಣಮಟ್ಟ ಕಾಪಾಡಲು ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದರೂ ಸಾರ್ವಜನಿಕ ವಲಯದಲ್ಲಿ ಸೇವಾನಿರತ ಸಂಸ್ಥೆಗಳು ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಸಹಾಯ ಮಾಡುತ್ತಿವೆ ಎಂದು ಮುಖ್ಯಶಿಕ್ಷಕ ಸುಭಾಷ್ ಭಾವಿಕಟ್ಟಿ ಹೇಳಿದರು.
ವೆಂಕಟರಾಯನಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಫ್ರೆಂಡ್ಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್‌ನಿಂದ ಒಂದು ಸಾವಿರ ನೋಟ್‌ಬುಕ್, ಪೆನ್, ಕಲಿಕಾ ಸಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘ-ಸಂಸ್ಥೆಗಳ ಸಹಕಾರದಿಂದ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ಮಾಡಬಹುದು ಎಂದರು. ಶಿಕ್ಷಕರಾದ ಶಶಿಕಲಾ, ಪಾರ್ವತೆಮ್ಮ, ರತ್ನಾ, ಸುವರ್ಣ, ಕಾಶಿಬಾಯಿ, ಅಕ್ಷತಾ ಇತರರಿದ್ದರು.