ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯಿಂದ ಕೈಗೊಳ್ಳುವ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಗಡಿ ಗುರುತು ಮಾಡುವ ವೇಳೆ ಮಾತನಾಡಿದರು. ಒಟ್ಟು 80 ಅಡಿ ರಸ್ತೆ ವಿಸ್ತರಣೆ ಮಾಡಲು ನಿರ್ಣಯಿಸಿದ್ದು, ಸಾರ್ವಜನಿಕರು ಸಹಕರಿಸಬೇಕು. ಶಾಸಕ ಬಸನಗೌಡ ತುರ್ವಿಹಾಳ ಕೆಕೆಆರ್‌ಡಿಬಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 10 ಕೋಟಿ ರೂ. ಮಂಜೂರು ಮಾಡಿಸಿದ್ದು, ಇದರಲ್ಲಿ ಅಶೋಕ ಶಾಸನದವರೆಗಿನ ರಸ್ತೆ, ರಸ್ತೆ ವಿಭಜಕ, ಎರಡು ಬದಿ ವಿದ್ಯುತ್ ದೀಪಗಳ ಅಳವಡಿಕೆ, ಬೃಹತ್ ಅಶೋಕನ ಸ್ತಂಭ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದರು.