ಅಬ್ಬರದ ಮಳೆ ಜನರದಲ್ಲಿ ಸಮಾಧಾನ

ರಾಯಚೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ.
ರಾಯಚೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ.
Published on
ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದುವರೆ ತಿಂಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಕೊನೆಗೂ ಕೃಪೆ ತೋರಿದ್ದಾನೆ. ಮುಂಗಾರು ಹಂಗಾಮಿನ ಮಳೆಗಾಲದ ಸಮಯದಲ್ಲಿಯೂ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಬಿಸಿಲಿನ ವಾತಾವರಣವಿದ್ದು, ಶುಕ್ರವಾರ ಸಂಜೆ ಸುರಿದ ಅಬ್ಬರದ ಮಳೆ ಜನರಲ್ಲಿ ಸಮಾಧಾನ ಮೂಡಿಸಿತು.
ಮಳೆ ಬೀಳದೆ ಒಂದೆಡೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಜಲಾಶಯ ನೀರಿನ ಕೊರತೆ ಎದುರಿಸುತ್ತಿವೆ. ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇರುವುದು ಜನರ ಬೇಸರಕ್ಕೆ ಕಾರಣವಾಗಿತ್ತು. ಶುಕ್ರವಾರ ಸಂಜೆ ಐದು ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದು ತಾಸು ಸುರಿಯಿತು.
ಬೀದಿಬದಿಯ ವ್ಯಾಪಾರಿಗಳು, ದೈನಂದಿನ ಕೆಲಸ ಮುಗಿಸಿಕೊಂಡು ವಾಪಸ್ ಮನೆ ತಲುಪುವ ಧಾವಂತದಲ್ಲಿದ್ದ ಜನರಿಗೆ ಮಳೆಯಿಂದ ಮನೆ ತಲುಪುವುದು ವಿಳಂಬವಾಯಿತಾದರೂ ಕೊನೆಗೂ ಮಳೆ ಸುರಿಯತಲ್ಲ ಎನ್ನುವ ಸಮಾಧಾನ ಲಭಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net