ಸಿರವಾರದಲ್ಲಿ ಹಾಲುಗಂಬ ಉತ್ಸವ ಅದ್ದೂರಿ

ಸಿರವಾರ ಬಯಲು ಆಂಜನೇಯ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಹಾಲುಗಂಬ ಉತ್ಸವ ನಡೆಯಿತು.
ಸಿರವಾರ ಬಯಲು ಆಂಜನೇಯ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಹಾಲುಗಂಬ ಉತ್ಸವ ನಡೆಯಿತು.
Published on
ಸಿರವಾರ: ಪಟ್ಟಣದ ಬಯಲು ಆಂಜನೇಯ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಾಲುಗಂಬ ಉತ್ಸವ ನಡೆಯಿತು.
ಪ್ರತಿ ವರ್ಷದಂತೆ ಎಳ್ಳಮಾವಾಸ್ಯೆ ಮರುದಿನ ನಡೆಯುವ ಹಾಲುಗಂಬ ಉತ್ಸವದಲ್ಲಿ ವಾಲ್ಮೀಕಿ ಸಮುದಾಯದ ಯುವಕರು ನಾ ಮುಂದು, ತಾ ಮುಂದು, ಎಂಬಂತೆ ಪೈಪೋಟಿಯಿಂದ ಹಾಲುಗಂಬ ಹತ್ತುವ ದೃಶ್ಯ ನೋಡುಗರ ಕಣ್ಮನ ಸೆಳೆಯಿತು. ಬೆಳಗ್ಗೆ ಅರ್ಚಕ ಯಲಗುರ್ದಾಚಾರ್ ಜೋಶಿ ನೇತೃತ್ವದಲ್ಲಿ ಹೋಮ-ಹವನ, ಆಂಜನೇಯ ಮೂರ್ತಿಗೆ ವಿಶೇಷ ಹೂವಿನ, ವಸ್ತ್ರದ ಅಲಂಕಾರ ಸೇವೆ ನಡೆದವು. ಹಾಲುಗಂಬ ಹತ್ತುವ ಸ್ಪರ್ಧೆಯಲ್ಲಿ ವೀರೇಶ ದೊರೆ ಚಿನ್ನಾನ್ ಪ್ರಥಮ ಸ್ಥಾನ ಪಡೆದು 11 ತೊಲೆ ಬೆಳ್ಳಿ ಕಡಗ ಪಡೆದರೆ, ಶಂಕರ ದ್ವಿತೀಯ ಸ್ಥಾನ ಪಡೆದು 5 ತೊಲೆ ಬೆಳ್ಳಿಯ ಕಡಗ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net