ಹಾಲಾಪುರ ಗ್ರಾಪಂ ವಿಂಗಡಣೆಗೆ ಠರಾವು ಪಾಸ್

ಹಾಲಾಪುರ ಗ್ರಾಪಂನಲ್ಲಿ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಪಂಚಾಯಿತಿ ವಿಂಗಡನೆ ಠರಾವು ಪಾಸ್ ಮಾಡಿದ ಬಗ್ಗೆ ಪಿಡಿಒ ವಿಶ್ವನಾಥ ಹೂಗಾರ ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸಾಬಮ್ಮ ಗಂಗಪ್ಪ, ಕೆಡಿಪಿ ಸದಸ್ಯ ಕರೆಯಪ್ಪ ಮೆಡಿಕಲ್, ರಂಗಪ್ಪ ಇದ್ದರು.
ಹಾಲಾಪುರ ಗ್ರಾಪಂನಲ್ಲಿ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಪಂಚಾಯಿತಿ ವಿಂಗಡನೆ ಠರಾವು ಪಾಸ್ ಮಾಡಿದ ಬಗ್ಗೆ ಪಿಡಿಒ ವಿಶ್ವನಾಥ ಹೂಗಾರ ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸಾಬಮ್ಮ ಗಂಗಪ್ಪ, ಕೆಡಿಪಿ ಸದಸ್ಯ ಕರೆಯಪ್ಪ ಮೆಡಿಕಲ್, ರಂಗಪ್ಪ ಇದ್ದರು.
Published on
ಕವಿತಾಳ: ಸಮೀಪದ ಹಾಲಾಪುರ ಗ್ರಾಪಂನಲ್ಲಿ ಸೋಮವಾರ ಮತ್ತು ಮಂಗಳವಾರ ಅಧ್ಯಕ್ಷೆ ಸಾಬಮ್ಮ ಗಂಗಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ವಿಂಗಡಣೆ ಕುರಿತು ಎರಡನೇ ಸಲ ಠರಾವು ಪಾಸ್ ಮಾಡಲಾಯಿತು. 
ಗ್ರಾಪಂ ಸದಸ್ಯರು ಮಾತನಾಡಿ, 2023ರಲ್ಲೇ ಗ್ರಾಪಂ ವಿಂಗಡನೆಗಾಗಿ ಠರಾವು ಪಾಸ್ ಮಾಡಲಾಗಿತ್ತು. ಕಳೆದ ಮೂರು ವರ್ಷದಿಂದ ಒತ್ತಾಯ ಮಾಡುತ್ತಿದ್ದು, ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಕಡಿವಾಣ ಕೂಡ ಹಾಕಬೇಕು ಎಂದರು.
ಕೆಡಿಪಿ ಸದಸ್ಯ ಕರೆಯಪ್ಪ ಮೆಡಿಕಲ್ ಮಾತನಾಡಿ, ವಿಂಗಡನೆ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. 
ಹಾಲಾಪುರ ಪ್ರಾಕೃಪಸ ಸಂಘದ ಅಧ್ಯಕ್ಷ ಜಗದೀಶಚಂದ್ರಸ್ವಾಮಿ ಮಾತನಾಡಿ, ಗ್ರಾಪಂ ವಿಂಗಡಣೆಗೆ ಎಲ್ಲರೂ ಒಪ್ಪಿದ್ದು, ಠರಾವು ಪಾಸ್ ಮಾಡುವಂತೆ ತಿಳಿಸಿದರು. ನಂತರ ಪಿಡಿಒ ವಿಶ್ವನಾಥ ಹೂಗಾರ ಮಾತನಾಡಿ, ಎಲ್ಲರ ಒಪ್ಪಿಗೆಯಂತೆ ಪಂಚಾಯಿತಿ ವಿಂಗಡನೆ ಬಗ್ಗೆ ಠರಾವು ಮಾಡಲಾಗುತ್ತಿದೆ ಎಂದು ತಿಳಿಸಿದರು. ತದನಂತರ ಇರಕಲ್ ಕೆರೆ ನೀರು ಬರುತ್ತಿಲ್ಲ, ಜೆಜೆಎಂ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು. 
ಪ್ರಮುಖರಾದ ಎ.ರಾಜ, ಬಸವರಾಜ ವಡಗೇರ, ಈರನಗೌಡ ದಳಪತಿ, ಸಣ್ಣ ವಾಸನಗೌಡ, ಬಸವರಾಜ ರಾಮತ್ನಾಳ, ಯೋಗೇಶರಾವ್ ದೇಸಾಯಿ. ಸಿದ್ಧಾರ್ಥ ಪಾಟೀಲ್, ಶರಣಪ್ಪ ಹಿರೇಮನಿ, ಸಿಬ್ಬಂದಿ ಪರಮಣ್ಣ, ರಂಗಪ್ಪ, ಗ್ಯಾನಪ್ಪ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net