ಹಾಲಾಪುರ ಪ್ರೌಢಶಾಲೆ ಭೋಜನಾಲಯಕ್ಕೆ ಬೀಗ

ಹಾಲಾಪುರ ಸರ್ಕಾರಿ ಪ್ರೌಢಶಾಲೆ ಭೋಜನಾಲಯಕ್ಕೆ ಗುತ್ತಿಗೆದಾರ  ರವಿ ದೇಸಾಯಿ ಬೀಗ ಹಾಕಿರುವುದು.
ಹಾಲಾಪುರ ಸರ್ಕಾರಿ ಪ್ರೌಢಶಾಲೆ ಭೋಜನಾಲಯಕ್ಕೆ ಗುತ್ತಿಗೆದಾರ ರವಿ ದೇಸಾಯಿ ಬೀಗ ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರನಿಗೆ ಕಾಮಗಾರಿ ಬಿಲ್ ಪಾವತಿಸದ ಅಧಿಕಾರಿಗಳು
ಕವಿತಾಳ: ಕಾಮಗಾರಿ ಮುಗಿದರೂ ಬಿಲ್ ಪಾವತಿ ಆಗದಿರುವ ಕಾರಣ ಸಮೀಪದ ಹಾಲಾಪುರದ ಸರ್ಕಾರಿ ಪ್ರೌಢಶಾಲೆಯ ಭೋಜನಾಲಯಕ್ಕೆ ಸೋಮವಾರ ಗುತ್ತಿಗೆದಾರ ಬೀಗ ಹಾಕಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬಿಸಿಯೂಟಕ್ಕಾಗಿ ಪರದಾಡಿದರು.
ಖಾತ್ರಿ ಯೋಜನೆಯಡಿ 2021-22ನೇ ಸಾಲಿನಲ್ಲಿ 12 ಲಕ್ಷ ರೂ. ವೆಚ್ಚದ ಭೋಜನಾಲಯ ಮತ್ತು 6 ಲಕ್ಷ ರೂ. ಮೊತ್ತದ ಹೈಟೆಕ್ ಶೌಚಗೃಹ ಕಾಮಗಾರಿ ಯನ್ನು ಗ್ರಾಪಂ ಮಾಜಿ ಅಧ್ಯಕ್ಷ ರವಿ ದೇಸಾಯಿ ಕೈಗೊಂಡಿದ್ದರು. 2022ನೇ ವರ್ಷದಲ್ಲೇ ಕಾಮಗಾರಿ ಮುಗಿಸಿ ಭೋಜನಾಲಯ ಮತ್ತು ಶೌಚಗೃಹ ಕಟ್ಟಡಗಳನ್ನು ಬಳಕೆಗೆ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಅಧಿಕಾರಿಗಳಿಗೆ ಬಿಲ್ ಪಾವತಿಗಾಗಿ ಮನವಿ ಮಾಡಿದರೂ ಹಣ ಬಿಡುಗಡೆಯಾಗಿರಲಿಲ್ಲ. ಈ ಕಾರಣಕ್ಕೆ ಅಸಮಾಧಾನಗೊಂಡ ರವಿ ದೇಸಾಯಿ, ಎರಡೂ ಕಟ್ಟಡಗಳಿಗೆ ಬೀಗ ಹಾಕಿ, ಬಿಲ್ ಪಾವತಿ ಆಗುವವರೆಗೆ ಬೀಗ ತೆರೆಯುವುದಿಲ್ಲವೆಂದು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮನವೊಲಿಸಿದರೂ ರವಿ ದೇಸಾಯಿ ಒಪ್ಪಲಿಲ್ಲ. ಬಿಲ್ ಪಾವತಿಯಾಗುವವರೆಗೆ ತೆರೆಯುವುದಿಲ್ಲವೆಂದು ಪುನರುಚ್ಚರಿಸಿದರು. ಹೀಗಾಗಿ ವಿದ್ಯಾರ್ಥಿಗಳು ಬಿಸಿಯೂಟಕ್ಕೆ ಪರದಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net