ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಗುರುಪೂರ್ಣಿಮೆಯನ್ನು ಸಾಯಿಬಾಬ ದೇವಸ್ಥಾನಗಳಲ್ಲಿ ಬುಧವಾರ ಶ್ರದ್ದೆ ಭಕ್ತಿಯಿಂದ ಆಚರಿಸಲಾಯಿತು.
ನಗರದ ಸಾಯಿ ಧ್ಯಾನ ಮಂದಿರ, ಸಾಯಿಬಾಬ ಮಂದಿರ ಸೇರಿ ನಾನಾ ದೇವಸ್ಥಾನಗಳಲ್ಲಿ ಭಕ್ತ ಸಾಗರವೆ ಹರಿದು ಬಂದಿತ್ತು.ಬೆಳಗ್ಗೆಯಿಂದರೆ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ದೇವರ ದರ್ಶನಕ್ಕೆ ನೂಕನುಗ್ಗಲು ಏರ್ಪಟ್ಟಿತ್ತು.ಅಜಾದ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮಗಳಿಗೆ ಹಲವು ಮಂದಿ ಭಕ್ತರು ಸಾಕ್ಷಿಯಾದರು.
ದೇವಸ್ಥಾನದ ಅಲಂಕಾರ ಎಲ್ಲರ ಗಮನ ಸೆಳೆಯಿತು. ಕಾಕಡಾರತಿ, ಕ್ಷೀರಾಭಿಷೇಕ, ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಹೋಮ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಡೆಯಿತು. ವಿಶೇಷವಾಗಿ ಸಾಯಿ ಧ್ಯಾನಮಂದಿರದಲ್ಲಿ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.