ತಾಲೂಕಾದ್ಯಂತ 23 ಗ್ರಾಮ ವಿದ್ಯುತ್ ಪ್ರತಿನಿಧಿಗಳು, 13 ಜನ ಮೀಟರ್ ರೀಡರ್, ಏಳು ಜನ ಮಾರ್ಗದಾಳು (ಲೈನ್‌ಮನ್) ಹಾಗೂ ಕಿರಿಯ ಸಹಾಯಕರು ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದಾರೆ. ಆನೆಹೊಸೂರು ವಿಭಾಗದಲ್ಲಿ 1927, ಮಾವಿನಭಾವಿ 2990, ಹಟ್ಟಿ 7967, ಗುರುಗುಂಟಾ 1912, ಮುದಗಲ್ 8409, ನಾಗರಹಾಳ 3045 ಸೇರಿ ಒಟ್ಟು 13044 ಆರ್‌ಆರ್ ಸಂಖ್ಯೆ ಹೊಂದಿರುವ ಮನೆಗಳಿದ್ದು, ಜೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಷ್ಕರಣೆ ಅರ್ಜಿ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಿದ್ದಾರೆ.