ವಕೀಲರ ಭವನ ನಿರ್ಮಾಣಕ್ಕೆ ಅನುದಾನ ನೀಡಲಿ

ಸಿಂಧನೂರಿನಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಶಾಸಕ ಹಂಪನಗೌಡ ಬಾದರ್ಲಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ವಕೀಲರಾದ ಎಂ.ಕಾಳಿಂಗಪ್ಪ, ಕೆ.ಅಮರೇಗೌಡ, ನಿರುಪಾದೆಪ್ಪ ಗುಡಿಹಾಳ, ಖಾಜಿಮಲಿಕ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಹಂಪನಗೌಡ ಬಾದರ್ಲಿಗೆ ಮನವಿ
  • ಸಿಂಧನೂರು ನ್ಯಾಯವಾದಿಗಳ ಸಂಘದಿಂದ ಒತ್ತಾಯ
ಸಿಂಧನೂರು: ನಗರದ ಹಳೇ ಐಬಿ ಜಾಗವನ್ನು ನ್ಯಾಯಾಲಯದ ಕಟ್ಟಡ, ನ್ಯಾಯಾಧೀಶರ ವಸತಿಗೃಹ ಹಾಗೂ ವಾಹನ ಪಾರ್ಕಿಂಗ್ ಅನುಕೂಲಕ್ಕಾಗಿ ಒದಗಿಸುವುದು ಮತ್ತು ವಕೀಲರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಬುಧವಾರ ಶಾಸಕ ಹಂಪನಗೌಡ ಬಾದರ್ಲಿಗೆ ಮನವಿ ಸಲ್ಲಿಸಲಾಯಿತು.
ಸ್ಥಳೀಯವಾಗಿ 500 ವಕೀಲರಿದ್ದು, 5 ಕೋರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ವಕೀಲರಿಗೆ ಸುಸಜ್ಜಿತ ಭವನ ಇಲ್ಲ. ಈಗಿರುವ ಕೋರ್ಟ್‌ಗಳಲ್ಲಿ 7000ರಿಂದ 8000 ಪ್ರಕರಣಗಳು ಬಾಕಿ ಇವೆ. ಅಲ್ಲದೆ ವಕೀಲರು ಮತ್ತು ಕಕ್ಷಿದಾರರು ತರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯಿಲ್ಲ.
ನ್ಯಾಯಾಲಯದ ಆವರಣದ ದಕ್ಷಿಣಕ್ಕೆ ಸ.ನಂ 767ರಲ್ಲಿ ಹಳೇ ಐಬಿ ಜಾಗವನ್ನು ವಕೀಲರ ಭವನ ನಿರ್ಮಾಣಕ್ಕೆ ಒದಗಿಸಿದರೆ ಅನುಕೂಲವಾಗಲಿದೆ. 2 ಎಕರೆ 22 ಗುಂಟೆ ಪೈಕಿ 1 ಎಕರೆ 10 ಗುಂಟೆ ಬಿಟ್ಟುಕೊಟ್ಟರೆ, ಜಿಲ್ಲಾ ನ್ಯಾಯಾಲಯ ನಿರ್ಮಾಣ, ವಾಹನ ಪಾರ್ಕಿಂಗ್, ನ್ಯಾಯಾಧೀಶರ ವಸತಿಗೃಹ ನಿರ್ಮಿಸಲು ಅನುಕೂಲವಾಗಲಿದೆ. ಆದ್ದರಿಂದ ಈ ಕುರಿತು ಸಂಬಂಧಿಸಿದ ಇಲಾಖೆಗೆ ಆದೇಶಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ವಕೀಲರಾದ ಎಂ.ಕಾಳಿಂಗಪ್ಪ, ಕೆ.ಅಮರೇಗೌಡ, ನಿರುಪಾದೆಪ್ಪ ಗುಡಿಹಾಳ, ಖಾಜಿಮಲಿಕ್, ಭೀಮರಾಯ, ಬಸವರಾಜ, ಬಾಬರ್‌ಪಾಷಾ, ಆರ್.ಕೆ.ನಾಗರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net