ಮಸ್ಕಿಯಲ್ಲಿ ಸಿಂಪಿಗ ಸಮಾಜದ ಆಮಂತ್ರಣ ಪತ್ರಿಕೆಯನ್ನು ಅಖಿಲ ಕರ್ನಾಟಕ ಬಣಗಾರ ಸಮಾಜ ಸಂಘಟನಾ ಸಮಿತಿಯ ಪ್ರಮುಖ ರಾಚಪ್ಪ ಸರಡಗಿ ಬಿಡುಗಡೆ ಮಾಡಿದರು. ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಹರಸೂರು, ಪ್ರಮುಖರಾದ ದೊಡ್ಡಪ್ಪ ಬುಳ್ಳಾ, ಶ್ರೀಧರ ಬಳೊಳ್ಳಿ, ಸುಜಾತಾ ಬುಳ್ಳಾ, ಮಂಜುನಾಥ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಘಟನಾ ಸಮಿತಿಯ ಪ್ರಮುಖ ರಾಚಪ್ಪ ಸರಡಗಿ ಮಾಹಿತಿ
ಆಮಂತ್ರಣ ಪತ್ರಿಕೆ ಬಿಡುಗಡೆ
ಮಸ್ಕಿ: ಸಿಂಪಿಗ ಸಮಾಜದ ಬಲವರ್ದನೆಗಾಗಿ ಸಮುದಾಯವರನ್ನು ಸಂಘಟಿಸಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಲಿಷ್ಠರಾಗುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಬಣಗಾರ ಸಮಾಜ ಸಂಘಟನಾ ಸಮಿತಿಯ ಪ್ರಮುಖ ರಾಚಪ್ಪ ಸರಡಗಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಮಸ್ಕಿಯ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಜು.26ರಂದು ರಾಜ್ಯ ಮಟ್ಟದ ಸಿಂಪಿಗ ಸಮಾಜದ ಬೃಹತ್ ಸಮಾವೇಶ, ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಗಲಕೋಟೆಯಲ್ಲಿ ಮಾ.22ರಂದು ರೂಪಿಸಿದ ಆಡಳಿತಾತ್ಮಕ ಚೌಕಟ್ಟಿನ ಅಂತಿಮ ರೂಪರೇಷೆಗಳಿಗೆ ಅಧಿಕೃತ ಮಾನ್ಯತೆ ನೀಡಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಪುರಸಭೆ ಅಧ್ಯಕ್ಷ ಹಾಗೂ ಸಿಂಪಿಗ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಹರಸೂರು, ಪ್ರಮುಖರಾದ ದೊಡ್ಡಪ್ಪ ಬುಳ್ಳಾ, ಶ್ರೀಧರ ಬಳೊಳ್ಳಿ, ವೀರಭದ್ರಪ್ಪ ಧನಶೆಟ್ಟಿ, ಶಂಕರಲಿಂಗಪ್ಪ ಧನಶೆಟ್ಟಿ, ಸುರೇಶ ನಾಗಲೀಕರ್, ವೀರೇಶ ಬುಳ್ಳಾ, ಸಂಗಪ್ಪ ಆನ್ವರಿ, ವೀರೇಶ ಆನಾಹೊಸೂರು, ಸುಜಾತಾ ಬುಳ್ಳಾ, ಮಂಜುನಾಥ ಇತರರಿದ್ದರು.