ಸರ್ಕಾರಿ ಆಸ್ಪತ್ರೆಯಲ್ಲಿ ಜಿ.ಪಂ ಸಿಇಒ ಪತ್ನಿಯ ಹೆರಿಗೆ

CEO ESHWAR KUMARA KANDO
CEO ESHWAR KUMARA KANDO
Published on
ರಾಯಚೂರು ಸರ್ಕಾರಿ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ದುರ್ಬಲರು ಮಾತ್ರ ಸೇವೆ ಪಡೆಯುತ್ತಾರೆಂದು ಅಸಡ್ಡೆ ತೋರುವವರಿಗೆ ಜಿಲ್ಲೆಯ ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ ಅವರು ತಮ್ಮ ಪತ್ನಿಯ ಹೆರಿಗೆಯನ್ನು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಇಚೇಗೆ ಮಾಡಿಸಿ, ಸರಳತೆ ಮೆರಯುವ ಮೂಲಕ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಸಂದೇಶ ರವಾನಿಸಿದ್ದಾರೆ.
ನಗರದಲ್ಲಿ ಹಲವಾರು ಖಾಸಗಿ ಅಸ್ಪತ್ರೆಗಳಿದ್ದರೂ ಸಹ ಮನಸ್ಸು ಮಾಡದೆ ಸರ್ಕಾರದ ಆಸ್ಪತ್ರೆಗಳಲ್ಲಿ ಸುಸಜ್ಜಿತ ಹೆರಿಗೆ ಕೊಠಡಿ, ವಾರ್ಡ್, ನುರಿತ ತಜ್ಞ ವೈದ್ಯರ ಸೇವೆ, ನಿಯಮಿತವಾಗಿ ನಿಗಾ ವಹಿಸುವ ಸಿಬ್ಬಂದಿಗಳ ಸೇವೆಯನ್ನು ಪ್ರತಿಯೊಬ್ಬರೂ ಪಡೆಯಲಿ ಎಂಬ ಸದುದ್ದೇಶದಿಂದ ತಮ್ಮ ಪತ್ನಿಯ ಹೆರಿಗೆಯನ್ನು ರಿಮ್ಸ್ ಆಸ್ಪತ್ರೆಯಲ್ಲಿ ಮಾಡಿಸಿದ್ದು, ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದು, ತಾಯಿ ಮಗು ಅರೋಗ್ಯವಾಗಿದ್ದಾರೆ.

ಸರ್ಕಾರವು ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಮಗುವಿನ ಆರೈಕೆಗಾಗಿ ನುರಿತ ಹೆರಿಗೆ ತಜ್ಞರು, ಸುಸಜ್ಜಿತ ಹೆರಿಗೆ ಕೊಠಡಿ, ಆಧುನಿಕ ಪರಿಕರಗಳು, ಸೂಕ್ತ ಪ್ರಯೋಗಾಲಯ ಪರೀಕ್ಷೆಗಳು, ಸಕಾಲದಲ್ಲಿ ಔಷಧೊಪಚಾರ, ಪೌಷ್ಟಿಕ ಆಹಾರ ಒದಗಿಸುವುದನ್ನು ಖುದ್ದು ಪರಿಶೀಲನೆಯಲ್ಲಿ ಕಂಡು ಬರುತ್ತಿರುವುದರಿಂದ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರು ಪಡೆಯಬೇಕು.
ಈಶ್ವರ ಕುಮಾರ ಕಾಂದೊ ಜಿಪಂ ಸಿಇಓ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net