ಕೃಷಿ ಬೆಲೆ ಏರಿಕೆ ತಪ್ಪಿಸಲು ಸರ್ಕಾರ ಕ್ರಮಗೊಳ್ಳಲಿ

ಚಾಮರಸ ಮಾಲಿ ಪಾಟೀಲ್
ಚಾಮರಸ ಮಾಲಿ ಪಾಟೀಲ್
Published on
ರಾಯಚೂರು
ಯುದ್ಧದ ಹಿನ್ನಲೆಯಲ್ಲಿ ರಸಗೊಬ್ಬರ ಸೇರಿ ಬೆಲೆ ಏರಿಕೆ ಹೊಡೆತ ಜನ ಸಾಮಾನ್ಯರನ್ನು ಕಾಡುತ್ತಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಯ ಬೆಲೆ ಏರಿಕೆ ಹೊಡೆತದಿಂದ ತಪ್ಪಿಸಲು ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅನೇಕ ರಸಗೊಬ್ಬರ ದರ ಹೆಚ್ಚಳವಾಗಿದ್ದು, ಜತೆಗೆ ರಾಜ್ಯ ಸರ್ಕಾರ ಎಫ್‌ಡಿಐ ಕಡ್ಡಾಯಗೊಳಿಸಿದೆ. ಬ್ಲಾಕ್‌ನಲ್ಲಿ ಮಾರಾಟ ಮಾಡಲು ಸರ್ಕಾರವೇ ಅನುಕೂಲ ಮಾಡಿ ಕೊಟ್ಟಂತಾಗಿದೆ. ಸರ್ಕಾರಗಳ ಬಳಿ ಎಲ್ಲಾ ರೈತರ ಹಿಡುವಳಿ ಮಾಹಿತಿಯಿದ್ದರು ಸರ್ಕಾರವೇ ರೈತರ ಭೂಮಿಗೆ ಅನುಗುಣವಾಗಿ ರಸಗೊಬ್ಬರದ ಗ್ಯಾರಂಟಿ ನೀಡಬೇಕು. ಒಂದೇ ದೇಶ, ಒಂದೇ ಪಡಿತರ ರೀತಿಯಲ್ಲಿಯೇ ರೈತರಿಗೆ ರಸಗೊಬ್ಬರ ನಿಗಧಿಪಡಿಸಬೇಕು ಎಂದರು.

ಕನಿಷ್ಟ ಬೆಂಬಲ ಬೆಲೆಗೆ ಯಾವುದೇ ಕಾನೂನಾತ್ಮಕ ನಿಯಮ ಇರದೇ ಇರುವರಿಂದ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ನಡೆಯುತ್ತಿದೆ. ಹೈಬ್ರಿಡ್ ಬಿಳಿಜೋಳ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿದ ನೈಜ ರೈತರಿಗೆ ಹಣ ಪಾವತಿಸಿಲ್ಲ. ನಕಲಿ ದಾಖಲೆ ನೀಡಿದವರಿಗೆ ಜೋಳದ ಹಣ ನೀಡಲಾಗಿದೆ.
ಮುಂಗಾರು, ಹಿಂಗಾರು ಸೇರಿ ರೈತರು ಮಾರಾಟ ಮಾಡಿದ ಜೋಳದ ಹಣ ಪಾವತಿಸಿಲ್ಲ. ಮೂರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರಸಗೊಬ್ಬರ ಬೆಲೆ ಇಳಿಕೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಾರ ಗಡವಿನ ನಂತರ ಪ್ರತಿಭಟನಾ ರ‌್ಯಾಲಿ ನಡೆಸುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಪ್ರಮುಖರಾದ ಮಲ್ಲಪ್ಪ ದಿನ್ನಿ, ಗೋವಿಂದ ನಾಯಕ, ವೆಂಕಪ್ಪ ಕಾರಬಾರಿ, ಶಂಕರಗೌಡ ದೇವತಗಲ್, ದೇವರಾಜ ನಾಯಕ, ಬೂದೆಯ್ಯಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net