ಶ್ರದ್ಧಾ ಭಕ್ತಿಯಿಂದ ಗುಡ್ ಪ್ರೈಡೇ ಆಚರಣೆ

ರಾಯಚೂರಿನ ಫ್ರಾನ್ಸಿಸ್ ಚರ್ಚ್‌ನಲ್ಲಿ ಶುಕ್ರವಾರ ಗುಡ್ ಪ್ರೈಡೇ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು. ಫ್ರಾನ್ಸಿಸ್ ಚರ್ಚ್‌ನ ಮೇಲ್ವಿಚಾರಕ ಜೋಸೆಫ್ ಚಾರ್ಲ್ಸ್ ಸುಂದರ ರಾಜ್, ಸಭಾ ಪಾಲಕರಾದ  ಪ್ಯಾರಿಷ್ ಪಾದ್ರಿ, ರೆವರೆಂಡ್ ಫಾದರ್ ಸ್ಯಾಮ್ ನಳನ್, ರೆವರೆಂಡ್ ಫಾದರ ಯುವರಾಜ್ ಇದ್ದರು.

Published on
ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಶುಕ್ರವಾರ ಕ್ರೈಸ್ತರು ಯೇಸುಕ್ರಿಸ್ತನು ಮರಣ ಅನುಭವಿಸಿದ ದಿನದ ದ್ಯೋತಕವಾಗಿ ಗುಡ್ ಪ್ರೈಡೇ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.
ನಗರದ ಫ್ರಾನ್ಸಿಸ್ ದೇವಾಲಯ,ಮೆಥೋಡಿಸ್ಟ್ ಚರ್ಚ್, ಇನ್‌ಫೆಂಟ್ ಜೀಸಸ್ ಶಾಲೆ, ಕ್ಯಾಥೋಲಿಕ್ ಚರ್ಚ್ ಸೇರಿದಂತೆ ಕ್ರೈಸ್ತರ ಪ್ರಾರ್ಥನಾ ಮಂದಿರಗಳಲ್ಲಿ ಯೇಸುಕ್ರಿಸ್ತನು ಶಿಲುಬೆ ಮೇಲೆ ಆಡಿರುವ 7 ಮಾತುಗಳನ್ನು ಧ್ಯಾನ ಮಾಡಲಾಯಿತು. ಒಂದು ಮಾತು ಧ್ಯಾನ ಮಾಡಿದ ನಂತರ ವಿಶೇಷ ಹಾಡು, ಪ್ರಾರ್ಥನೆ ನಡೆಯಿತು.
ನಗರದ ಫ್ರಾನ್ಸಿಸ್ ಚರ್ಚ್‌ನ ಮೇಲ್ವಿಚಾರಕ ಜೋಸೆಫ್ ಚಾರ್ಲ್ಸ್ ಸುಂದರ ರಾಜ್ ಮಾತನಾಡಿ, ಯೇಸುಕ್ರಿಸ್ತನು 2000 ಸಾವಿರ ವರ್ಷಗಳ ಹಿಂದೆ ಭೂಲೋಕಕ್ಕೆ ಮನುಷ್ಯ ಅವತಾರ ತಾಳಿ ಬಂದನು. ಮನುಷ್ಯನಂತೆ ಲೋಕದಲ್ಲಿ ಜೀವಿಸಿದನು. ಆದರೆ, ಪಾಪ ಮಾತ್ರ ಮಾಡಲಿಲ್ಲ. ಆದರೂ ಆಗಿನ ರೋಮ್ ಸಾಮ್ರಾಜ್ಯದಲ್ಲಿ ಯೆಹೂದ್ಯರು ಆತನನ್ನು ಶಿಲುಬೆಯ ಮರಣಕ್ಕೆ ಒಪ್ಪಿಸಿದರು.
ಆದರೆ, ಆತನು ಮೂರು ದಿನಗಳ ನಂತರ ಪುನರುತ್ಥಾನವಾದನು. ಹೀಗಾಗಿ ಕ್ರೈಸ್ತರು ಕೂಡ ಲೋಕದಲ್ಲಿ ಇರುವಾಗ ಕ್ರಿಸ್ತನಿಗೆ ವಿರುದ್ಧವಾದ ಕೆಲಸಗಳನ್ನು ಮಾಡಬಾರದು. ಕ್ರಿಸ್ತನಂತೆ ಜೀವನ ಮಾಡಬೇಕು’ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಭಾ ಪಾಲಕರಾದ ಪ್ಯಾರಿಷ್ ಪಾದ್ರಿ, ರೆವರೆಂಡ್ ಫಾದರ್ ಸ್ಯಾಮ್ ನಳನ್, ರೆವರೆಂಡ್ ಫಾದರ ಯುವರಾಜ್ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net