ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಚಿನ್ನ ಮತ್ತು ತಾಮ್ರದ ಪರಿಶೋಧನೆ ಹಾಗು ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ಅದಿರುಗಳ ಪರಿಶೋಧನೆ ಕಾರ್ಯ ಪರಿಶೀಲನೆಗೆ ಮಾಡಿದ್ದೇನೆಂದು ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮ ಮಲ್ಲು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ,ತೆಲಂಗಾಣದ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಾಲರೀಸ್ ಕಂಪನಿ ಲಿ. ಸರ್ವೆ ಹಾಗೂ ಪರಿಶೀಲನಾ ಪರವಾನಗಿ ಪಡೆದಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯ ದೇವದುರ್ಗ ಅನೇಕ ಕಡೆ ಚಿನ್ನ ಮತ್ತು ತಾಮ್ರದ ಪರಿಶೋಧನೆಗಾಗಿ ಭೌತಿಕವಾಗಿ ಸ್ಥಳ ಪರಿಶೀಲನೆ ಮಾಡಿ ಸರ್ವೆ ಪರಿಶೋಧನೆ ಕಾರ್ಯಕ್ಕೆ ಚಾಲನೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಗಳ ತಂಡದೊಂದಿಗೆ ಪರಿಶೀಲನೆ ಮಾಡಿದ್ದೇವೆ.
ಆದಷ್ಟು ಶೀಘ್ರದಲ್ಲೇ ಚಿನ್ನ ಹಾಗೂ ತಾಮ್ರದ ಅದಿರು ಸರ್ವೆ ಹಾಗೂ ಪರಿಶೋಧನೆ ಕಾರ್ಯ ಆರಂಭವಾಗುತ್ತಿದ್ದು, ಅದಿರಿನ ಪ್ರಮಾಣ ಎಷ್ಟಿದೆ, ಎಲ್ಲಿದೆ ,ಇದೆಯಾ, ಇಲ್ವಾ ಎಲ್ಲವನ್ನೂ ಪರಿಶೋಧನೆ ಮಾಡುತ್ತೇವೆ. ಸರ್ವೆ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಕೊಡುತ್ತೇವೆ.
ಈ ಪ್ರದೇಶದಲ್ಲಿ ಚಿನ್ನ ಹಾಗೂ ಇತರ ಮಿನಿರಲ್‌ಗಳು ಇರುವುದರಿಂದ ಸ್ಥಳ ಆಯ್ಕೆ ಮಾಡಲಾಗಿದೆ. ವರದಿ ಆಧಾರದ ಮೇಲೆ ಮುಂದೆ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಧಾರ ಮಾಡುತ್ತವೆ. ಮುಂದೆ ಇಲ್ಲಿ ಗಣಿಗಾರಿಕೆ ಮಾಡುವುದು ,ಟೆಂಡರ್‌ಗಳನ್ನ ಕರೆಯುವುದು ಸರ್ಕಾರಗಳ ನಿರ್ಧಾರವಾಗಿದೆ. ಸಿಂಗರೇಣಿ ಕಾಲರೀಸ್ ಕಂಪನಿ ಲಿ. ಪರಿಶೀಲನೆ ಹಾಗೂ ಸರ್ವೆಗೆ ಮಾತ್ರ ಪರವಾನಗಿ ಪಡೆದಿದೆ ಎಂದರು.