ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ನಗರ ಸಿಂಧನೂರು. ನಿತ್ಯ ನಗರಕ್ಕೆ ಬಂದು ಹೋಗುವವರ ಸಂಖ್ಯೆ ಹಾಗೂ ಸ್ಥಳೀಯ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತ್ತಿದೆ. ಜನಸಾಮಾನ್ಯರಿಗೆ ಸ್ಥಳೀಯವಾಗಿ ಸಾರಿಗೆ ಸೇವೆ ಒದಗಿಸುವಲ್ಲಿ ಸ್ಥಳೀಯ ಆಟೋ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುತ್ತಿರುವ ಜನದಟ್ಟಣೆಯಿಂದ ನಗರದ ಹಲವೆಡೆ ಆಟೋ ನಿಲ್ದಾಣ ಇಲ್ಲದೆ ಸಮಸ್ಯೆ ಎದುರಾಗಿದೆ. ಆದ್ದರಿಂದ ನಗರದ ಕುಷ್ಟಗಿ ಮಾರ್ಗದ ಬಸ್ ವೃತ್ತ, ಬಸ್ ನಿಲ್ದಾಣ ಬಳಿ ಸಹನಾ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ನಗರಸಭೆ ಜಾಗದಲ್ಲಿ ಆಟೋ ಸ್ಟಾೃಂಡ್‌ಗೆ ಅವಕಾಶ ಒದಗಿಸಿ, ಗ್ರಿಲ್, ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿದರು.