ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಿ

ಅಕ್ಕಯ್ ಪದ್ಮಶಾಲಿ
ಅಕ್ಕಯ್ ಪದ್ಮಶಾಲಿ
Published on
ರಾಯಚೂರು
ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಕೂಡಲೇ ನೇಮಕಾತಿಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲು ನೀಡುವ ಜತೆಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕೆಂದು ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜಿಕವಾಗಿ ಬಹಿಷ್ಕಾರದಿಂದಾಗಿ ಬಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಆದರೆ ಬಿಕ್ಷಾಟನೆ ನಿಷೇಧದಿಂದಾಗಿ ಅತಂತ್ರ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ಮೀಸಲಾತಿ ಹಾಗೂ ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಮೇಲುಸ್ತುವಾರಿ ಸಮಿತಿ ರಚಿಸಬೇಕು. 2023 ರಲ್ಲಿ ಮಹಿಳಾ ಮೀಸಲು ಕಾಯ್ದೆ ರೂಪಿತವಾಗಿದ್ದರೂ ಲಿಂಗತ್ವ ಅಲ್ಪಸಂಖ್ಯಾತರ ಮಹಿಳೆಯರಿಗೆ ಮಿಸಲು ಕಾಯ್ದೆಯಡಿ ಸೇರ್ಪಡೆಯಾಗದೇ ಇರುವದು ಖೇದ ಸಂಗತಿಯಾಗಿದೆ.
ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆನಲ್ಲಿ 2002 ರ ದಾಖಲೆ ನೀಡಲು ಸೂಚಿಸಲಾಗಿದೆ. ಆದರೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಧ್ಯವಾಗದೇ ಇರುವದಿರಿಂದ ಮತದಾನ ಹಕ್ಕಿನಿಂದಲೂ ವಂಚಿತವಾಗುವಂತಾಗಿದೆ. ಕಾರಣ ಚುನಾವಣಾ ಆಯೋಗ ಎಸ್‌ಐಆರ್‌ನಲ್ಲಿ ಪ್ರತ್ಯೇಕವಾಗಿ ಗುರುತಿಸಿ ದಾಖಲೆಯಿಲ್ಲದೇ ಮತದಾರರ ಪಟ್ಟಿ ಸೇರ್ಪಡೆಗೆ ನಿರ್ದೇಶನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಂದನಾ, ಅಬೀದಾ ಬೇಗಂ, ಲಕ್ಷ್ಮಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net