ಎನ್.ಎಸ್.ಬೋಸರಾಜುಗೆ ಸಚಿವ ಸ್ಥಾನ ನೀಡಿ

ಮಾನ್ವಿಯ ಬಸವ ವೃತ್ತದಲ್ಲಿ ಎನ್.ಎಸ್.ಬೋಸರಾಜು ಅಭಿಮಾನಿ ಬಳಗದಿಂದ ಬಹಿರಂಗ ಸಭೆ ನಡೆಯಿತು. ಮುಖಂಡರಾದ ಶರಣಪ್ಪ ಗುಡದಿನ್ನಿ, ಕುರ್ಡಿ ಚಂದ್ರಶೇಖರ್, ಖಾಲಿದ್ ಗುರು, ಕೆ.ಬಸವಂತಪ್ಪ, ರಾಜಾ ಸುಭಾಷ್, ಚಂದ್ರನಾಯಕ ಇತರರಿದ್ದರು.
ಮಾನ್ವಿಯ ಬಸವ ವೃತ್ತದಲ್ಲಿ ಎನ್.ಎಸ್.ಬೋಸರಾಜು ಅಭಿಮಾನಿ ಬಳಗದಿಂದ ಬಹಿರಂಗ ಸಭೆ ನಡೆಯಿತು. ಮುಖಂಡರಾದ ಶರಣಪ್ಪ ಗುಡದಿನ್ನಿ, ಕುರ್ಡಿ ಚಂದ್ರಶೇಖರ್, ಖಾಲಿದ್ ಗುರು, ಕೆ.ಬಸವಂತಪ್ಪ, ರಾಜಾ ಸುಭಾಷ್, ಚಂದ್ರನಾಯಕ ಇತರರಿದ್ದರು.
Published on
ಮಾನ್ವಿ: ಎಂಎಲ್ಸಿ ಎನ್.ಎಸ್.ಬೋಸರಾಜುಗೆ ಸಚಿವ ಸ್ಥಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ನೀಡಬೇಕೆಂದು ಪಟ್ಟಣದ ಬಸವ ವೃತ್ತದಲ್ಲಿ ಗುರುವಾರ ಎನ್.ಎಸ್. ಬೋಸರಾಜು ಅಭಿಮಾನಿ ಬಳಗದ ನೇತೃತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು. 
ಬಳಗದ ಸಂಚಾಲಕ ಶಿವರಾಜ ನಾಯಕ ಮಾತನಾಡಿ, ಬೋಸರಾಜು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯ, ಸಚಿವರಾಗಿ ತೆಲಾಂಗಣ ಹಾಗೂ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಕೆಲಸ ಮಾಡಿ ಎರಡೂ ಕಡೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಹಿಂದುಳಿದ ಜಿಲ್ಲೆ ಅಭಿವೃದ್ಧಿಗಾಗಿ ಬೋಸರಾಜುಗೆ ಸಚಿವ ಸ್ಥಾನದ ಜತೆಗೆ ರಾಯಚೂರು ಉಸ್ತುವಾರಿ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಾಲಸ್ವಾಮಿ ಕೊಡ್ಲಿ ಮಾತನಾಡಿ, ಸರ್ಕಾರದಿಂದ ಬಹುಕೋಟಿ ಅನುದಾನ ತಂದು ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 2028ರಲ್ಲಿ ಜಿಲ್ಲೆಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹಾಗೂ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಶರಣಪ್ಪ ಗುಡದಿನ್ನಿ, ಕುರ್ಡಿ ಚಂದ್ರಶೇಖರ್, ಖಾಲಿದ್ ಗುರು, ಕೆ.ಬಸವಂತಪ್ಪ, ರಾಜಾ ಸುಭಾಷ್, ಚಂದ್ರನಾಯಕ, ತಿಪ್ಪಣ್ಣ ಬಾಗಲವಾಡ, ಅಮ್ಜದ್ ಖಾನ್, ಸುಖಮುನಿ, ಶರಣೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net