ಮಸ್ಕಿ ಸರ್ಕಾರಿ ಹಿಪ್ರಾ ಕೇಂದ್ರ ಶಾಲೆಯಲ್ಲಿ ಹೆಣ್ಣು ಮಗು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಉದ್ಘಾಟಿಸಿದರು. ಪ್ರಮುಖರಾದ ಪಂಪಾಪತಿ ಹೂಗಾರ, ಮೋಹನ ಬಾವಿಮನಿ, ಜಿ.ವೆಂಕಟೇಶ, ಅಮರೇಶ ಪತ್ತಾರ, ಡಾ.ಅಮರೇಶ, ಶಶಿರೇಖಾ ಇತರರಿದ್ದರು.
ಮಸ್ಕಿ: ಹೆಣ್ಣು ಮಗು ಹುಟ್ಟಿದರೆ ಅಲಕ್ಷಿಸಬೇಡಿ. ಮನೆಗೆ ಮಹಾಲಕ್ಷ್ಮೀ ಇದ್ದಂತೆ. ಚೆನ್ನಾಗಿ ಓದಿಸಿ ಸುಶಿಕ್ಷಿತರನ್ನಾಗಿಸಬೇಕು ಎಂದು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕೆಂದ್ರ ಶಾಲೆಯಲ್ಲಿ ಬುಧವಾರ ‘ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಇಡೀ ಸಮಾಜವನ್ನು ಮುನ್ನೆಡೆಸುವ ಶಕ್ತಿಯಾಗಿದೆ ಎಂದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಪಾಪತಿ ಹೂಗಾರ ಮಾತನಾಡಿ, ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಸಾಕಷ್ಟು ವ್ಯಾತ್ಯಾಸವಾಗಿದೆ. ಇದರಿಂದ ಸಾಮಾಜದಲ್ಲಿ ಸಾಮಾಜಿಕ ಮತ್ತು ಕೌಟಂಬಿಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿಡಿಪಿಒ ಮೇಲ್ವಿಚಾರಕಿ ಶಿವಲೀಲಾ ಹಿರೇಮಠ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ಬಹಳ ಮುಖ್ಯವಾಗಿದ್ದು, ಶಿಸ್ತುಬದ್ಧವಾಗಿ ಬೆಳೆಸಬೇಕು ಎಂದರು. ಪ್ರಭಾರ ಮುಖ್ಯಶಿಕ್ಷಕ ಮೋಹನ ಬಾವಿಮನಿ, ಜಿ.ವೆಂಕಟೇಶ, ಅಮರೇಶ ಪತ್ತಾರ, ಡಾ.ಅಮರೇಶ, ಶಶಿರೇಖಾ ಇತರರಿದ್ದರು.