ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ. ಬಿಸಿಗಾಳಿ ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಗಳಿರುವ ಗ್ರಾಮಗಳನ್ನು ಗುರುತಿಸಿ ಮುಂಜಾಗ್ರತೆವಹಿಸಬೇಕು. ಈ ಕುರಿತು ಮಾಹಿತಿ ಪಡೆಯಲು ಪ್ರತಿ ಸೋಮವಾರ ವಿಸಿ ಮೂಲಕ ಸಭೆ ಕರೆಯುತ್ತೆನೆ ತಾವು ಇಲ್ಲಿಗೆ ಬರುವುದು ಬೇಕಿಲ್ಲ ಆಯಾ ತಾಲ್ಲೂಕಿನ ಅಧಿಕಾರಿಗಳು ತಾವಿದ್ದ ಸ್ಥಳದಿಂದಲೇ ಮಾಹಿತಿ ಕೊಡಬೇಕು. ಕುಡಿಯುವ ನೀರಿನ ಸಹಾಯವಾಣಿಯಿಂದ ಬರುವ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.