ಕ್ರೀಡಾಕೂಟದಲ್ಲಿ ಬಾಲಕಿಯರ ಉತ್ತಮ ಸಾಧನೆ

ದೇವದುರ್ಗ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಆದಿ, ತಂಡದ ವ್ಯವಸ್ಥಾಪಕಿ ಸುಮಿತ್ರಾ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಇತರರಿದ್ದರು.
ದೇವದುರ್ಗ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಆದಿ, ತಂಡದ ವ್ಯವಸ್ಥಾಪಕಿ ಸುಮಿತ್ರಾ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಸಾಧನೆ
  • ದೇವದುರ್ಗ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ
ದೇವದುರ್ಗ: ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ವಾಲಿಬಾಲ್, ಕಬಡ್ಡಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಕಬಡ್ಡಿಯಲ್ಲಿ ರಕ್ಷಿತಾ, ರೇಣುಕಾ, ನಾಗರತ್ನ, ತೇಜಸ್ವಿನಿ, ದೇವಮ್ಮ, ಕಾವೇರಿ, ಜ್ಯೋತಿ, ಭಾಗ್ಯವತಿ, ಮೇಘನಾ ತಂಡ ಪ್ರಥಮ ಸ್ಥಾನ ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಅಕ್ಷಿತಾ, ಅಸ್ಮಾ, ಶಾಹೀರಾಬಾನು, ಅಶ್ವಿನಿ, ಭಾಗ್ಯಶ್ರೀ, ರೇಣುಕಾ, ಮಂಜುಳಾ, ಶಿಲ್ಪಾ, ಗಂಗಮ್ಮ, ಗೌರಮ್ಮ ತಂಡ ಪ್ರಥಮ ಸ್ಥಾನ ಪಡೆಯಿತು.
ಉದ್ದ ಜಿಗಿತದಲ್ಲಿ ರಕ್ಷಿತಾ, ಚಕ್ರ ಎಸೆತದಲ್ಲಿ ಅಮೃತಾ ನಾಯಕ, ಎತ್ತರ ಜಿಗಿತದಲ್ಲಿ ಸ್ವಪ್ನಾ, 100ಮೀ. ಓಟದಲ್ಲಿ ಮಹಾಂತಮ್ಮ, 400 ಮೀ. ಓಟದಲ್ಲಿ ನಾಗರತ್ನ, ಭರ್ಚಿ ಎಸೆತದಲ್ಲಿ ತೇಜಸ್ವಿನಿ, 200 ಮೀ. ಓಟದಲ್ಲಿ ಮಹಾಂತಮ್ಮ, 800 ಮೀ. ಓಟದಲ್ಲಿ ರೇಣುಕಾ ಪ್ರಥಮ ಸ್ಥಾನ ಪಡೆದರು. ಎತ್ತರ ಜಿಗಿತದಲ್ಲಿ ರಕ್ಷಿತಾ ದ್ವಿತೀಯ ಸ್ಥಾನ ಪಡೆದರು. ಪಲ್ಲವಿ ನೇತೃತ್ವದ ಥ್ರೋ ಬಾಲ್ ತಂಡ ದ್ವಿತೀಯ ಸ್ಥಾನ ಪಡೆದಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಆದಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net