ಕೆರೆ ನೀರನ್ನು ಪರೀಕ್ಷೆಗೊಳಪಡಿಸಿ

ಸಿರವಾರ ತಾಲೂಕಿನ ಶಾಖಾಪುರ ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ವೀಕ್ಷಣೆ ಮಾಡಿದ ತಾಪಂ ಇಒ ಮಂಜುನಾಥ ಜಾವೂರು ಈ ಕುರಿತು ಪಿಡಿಒ ಮಮತಾ ಅವರೊಂದಿಗೆ ಚರ್ಚಿಸಿದರು.
ಸಿರವಾರ ತಾಲೂಕಿನ ಶಾಖಾಪುರ ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ವೀಕ್ಷಣೆ ಮಾಡಿದ ತಾಪಂ ಇಒ ಮಂಜುನಾಥ ಜಾವೂರು ಈ ಕುರಿತು ಪಿಡಿಒ ಮಮತಾ ಅವರೊಂದಿಗೆ ಚರ್ಚಿಸಿದರು.
Published on

ಸಿರವಾರ: ಅತ್ತನೂರು ಗ್ರಾಪಂ ವ್ಯಾಪ್ತಿಯ ಶಾಖಾಪುರ ಗ್ರಾಮದ ಕುಡಿಯುವ ನೀರಿನ ಕೆರೆಗೆ ತಾಪಂ ಇಒ ಮಂಜುನಾಥ ಜಾವೂರ್ ಭೇಟಿ ನೀಡಿದರು.

ಜನರು ಕುಡಿಯಲು ಬಳಸುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಪರೀಕ್ಷೆಗೆ ಒಳಪಡಿಸಬೇಕೆಂದು ಪಿಡಿಒಗೆ ಸೂಚಿಸಿದರು. ಕುಡಿಯುವ ನೀರಿನ ಟ್ಯಾಂಕ್ ಸೋರುತ್ತಿದ್ದು, ದುರಸ್ತಿ ಮಾಡಿಸಬೇಕೆಂದು ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಇಒ, ಅತ್ತನೂರು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕುಡಿಯುವ ನೀರಿನ ಪೈಪ್‌ಗಳು ಸೋರಿಕೆಯಾಗದಂತೆ ನೋಡಿಕೊಳ್ಳಬೇಕೆಂದು ನೀರುಗಂಟಿಗಳಿಗೆ ಸೂಚಿಸಿದರು.

ನಂತರ ಪಂಚಾಯಿತಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. ಪಿಡಿಒ ಮಮತಾ, ಕಾರ್ಯದರ್ಶಿ ನಾಗರಾಜ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net