ಅಳತೆಗೆ ತಕ್ಕ ಕೆಲಸ ನಿರ್ವಹಿಸಿ ಕೂಲಿ ಪಡೆಯಿರಿ

ಮಾರಲದಿನ್ನಿ ಜಲಾಶಯದ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ರೋಜ್‌ಗಾರ್ ದಿನ ಆಚರಿಸಲಾಯಿತು. ತಾಪಂ ಇಒ ಅಮರೇಶ ಯಾದವ್, ಎಡಿ ಶಿವಾನಂದರಡ್ಡಿ, ಪಿಡಿಒಗಳಾದ ಸಂತೋಷ, ನಾಗರಾಜ ಹಾಗೂ ನರೇಗಾ ಕೂಲಿ ಕಾರ್ಮಿಕರು ಇದ್ದರು.
ಮಾರಲದಿನ್ನಿ ಜಲಾಶಯದ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ರೋಜ್‌ಗಾರ್ ದಿನ ಆಚರಿಸಲಾಯಿತು. ತಾಪಂ ಇಒ ಅಮರೇಶ ಯಾದವ್, ಎಡಿ ಶಿವಾನಂದರಡ್ಡಿ, ಪಿಡಿಒಗಳಾದ ಸಂತೋಷ, ನಾಗರಾಜ ಹಾಗೂ ನರೇಗಾ ಕೂಲಿ ಕಾರ್ಮಿಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಅಮರೇಶ ಯಾದವ್ ಹೇಳಿಕೆ
  • ಮಸ್ಕಿ ಮಾರಲದಿನ್ನಿ ರೋಜ್‌ಗಾರ್ ದಿನಾಚರಣೆ
ಮಸ್ಕಿ: ಉದ್ಯೋಗ ಖಾತ್ರಿ ಕೂಲಿಕಾರರು ಅಳತೆಯನುಸಾರ ಕೆಲಸ ನಿರ್ವಹಿಸಿ ಸಂಪೂರ್ಣ ಕೂಲಿ ಮೊತ್ತ ಪಡೆಯಬೇಕು ಎಂದು ತಾಪಂ ಇಒ ಅಮರೇಶ ಯಾದವ್ ಹೇಳಿದರು.
ತಾಲೂಕಿನ ಮಾರಲದಿನ್ನಿ ಜಲಾಶಯದ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ರೋಜ್‌ಗಾರ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಸಿಗೆ ಹಿನ್ನೆಲೆಯಲ್ಲಿ ಹೊಲಗಳಲ್ಲಿ ಕೆಲಸ ಇಲ್ಲದೆ ಇರುವುದರಿಂದ ನರೇಗಾ ಕೆಲಸಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಗರಿಷ್ಠ ಸಂಖ್ಯೆಯಲ್ಲಿ ಕೆಲಸ ಒದಗಿಸಲಾಗುತ್ತದೆ. ಬರುವ ಜೂನ್‌ನಲ್ಲಿ ಶಾಲಾ-ಕಾಲೇಜುಗಳು ಆರಂಭವಾಗುತ್ತವೆ. ರೈತರ ಮಕ್ಕಳಿಗೆ ಶಾಲಾ ಫೀ, ಪುಸ್ತಕ ಖರೀದಿ ಹಾಗೂ ಕೃಷಿ ಚಟುವಟಿಕೆ ಆರಂಭವಾಗುವುದರಿಂದ ಬೀಜ ಖರೀದಿಗೆ ಅನುಕೂಲವಾಗಲಿದೆ. ಬೇಸಿಗೆ ಝಳ ಹೆಚ್ಚಿದ್ದು, ಕೂಲಿ ಕಾರ್ಮಿಕರು ಆರೋಗ್ಯದ ಕಡೆ ಗಮನ ಹರಿಸಬೇಕು. ನರೇಗಾ ಕಾಮಗಾರಿ ಸ್ಥಳದಲ್ಲಿ ನೆರಳು, ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒದಗಿಸಲಾಗುತ್ತದೆ. ಸರ್ಕಾರದ ಆದೇಶದಂತೆ ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು ಎಂದರು.
ತಾಪಂ ಎಡಿ ಶಿವಾನಂದರಡ್ಡಿ ಕಾಮಗಾರಿ ಪರಿಶೀಲಿಸಿದರು. ತಾಂತ್ರಿಕ ಸಹಾಯಕ ಇಂಜಿನಿಯರ್ ಅರುಣ್ ಕೆಲಸದ ಅಳತೆ ಪಡೆದರು. ಮಾರಲದಿನ್ನಿ ಗ್ರಾಪಂ ಪಿಡಿಒ ಸಂತೋಷ, ಸಂತೆಕೆಲ್ಲೂರು ಪಿಡಿಒ ನಾಗರಾಜ, ತಾಂತ್ರಿಕ ಸಂಯೋಜಕ ಸೈಮನ್ ರಿಚರ್ಡ್, ಸಿಬ್ಬಂದಿ ಅಜೀಂ ಪಾಷಾ, ಜಾವೀದ್ ಪಾಷಾ, ಸತೀಶ್, ದುರ್ಗೆಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net