ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣ

ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕ್ಷಯ ರೋಗ ದಿನ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಜ್ಯೋತಿ ಹಿರೇಮಠ ಕ್ಷಯ ರೋಗ ಸೋಂಕಿತರಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಿದರು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ, ಕ್ಷಯ ಮೇಲ್ವಿಚಾರಕ ಭೀಮೇಶ್, ಎಲ್‌ಟಿಒ ರವಿಚಂದ್ರ, ಎಕ್ಸ್-ರೇ ತಂತ್ರಜ್ಞೆ ಶಿರೀನಾ ಬೇಗಂ, ಎನ್‌ಸಿಡಿ ಸಮಾಲೋಚಕರಾದ ಉಮೇಶ್ ನಾಯಕ, ಜಾವಿದ್, ಯಂಕೋಬ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಪೂರ್ಣ ಗುಣ

ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣ

ಅರಕೇರಾ: ಕ್ಷಯರೋಗ ಕುರಿತಾದ ತಪ್ಪು ಕಲ್ಪನೆಗಳಿಂದ ದೂರವಿದ್ದು, ರೋಗದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಪಂ, ಆರೋಗ್ಯ ಇಲಾಖೆ ಹಾಗೂ ಕ್ಷಯ ರೋಗ ನಿರ್ಮೂಲನಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯರೋಗ ಶ್ವಾಸಕೋಶವನ್ನು ಬಾಧಿಸುವ ಗಂಭೀರ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಬಹುದು. ಸರ್ಕಾರದ ಆರೋಗ್ಯ ಸೇವೆಗಳ ಮೂಲಕ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಿ ಎಂದರು.
ತಾಲೂಕು ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಮಹೇಶ ನಾಯಕ ಮಾತನಾಡಿ, 2 ವಾರಕ್ಕಿಂತ ಹೆಚ್ಚು ಕಾಲ ಇರುವ ಕೆಮ್ಮು, ಸಾಯಂಕಾಲ ಜ್ವರ, ಹಸಿವು ಕಡಿಮೆ, ಕಫ ಬರುವುದು ಕ್ಷಯರೋಗದ ಆರಂಭಿಕ ಸೂಚನೆಗಳಾಗಿವೆ.
ಇಂಥ ಲಕ್ಷಣಗಳು ಕಂಡು ಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ದೃಢಪಟ್ಟಲ್ಲಿ 6 ತಿಂಗಳವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಕ್ಷಯ ರೋಗಿಗಳಿಗೆ ನಿಕ್ಷಯ ಪೋಷಣ ಯೋಜನೆಯಡಿ ಪ್ರತಿ ತಿಂಗಳು ಸಾವಿರ ರೂ. ನಂತೆ ಒಟ್ಟು ಆರು ಸಾವಿರ ರೂ. ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ. ಜತೆಗೆ ನಿಕ್ಷಯ ಮಿತ್ರ ಯೋಜನೆಯಡಿ 13 ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ವೈದ್ಯಾಧಿಕಾರಿ ಡಾ.ಜ್ಯೋತಿ ಹಿರೇಮಠ, ಕ್ಷಯ ಮೇಲ್ವಿಚಾರಕ ಭೀಮೇಶ್, ಎಲ್‌ಟಿಒ ರವಿಚಂದ್ರ, ಎಕ್ಸ್-ರೇ ತಂತ್ರಜ್ಞ ಶಿರೀನಾ ಬೇಗಂ, ಎನ್‌ಸಿಡಿ ಸಮಾಲೋಚಕರಾದ ಉಮೇಶ್ ನಾಯಕ, ಜಾವಿದ್, ಯಂಕೋಬ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net