ಆರನೇ ಗ್ಯಾರಂಟಿ ಭರವಸೆ ಈಡೇರಿಸಿ

ಲಿಂಗಸುಗೂರು ಎಸಿ ಕಚೇರಿ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಅಂಗನವಾಡಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಲಿಂಗಸುಗೂರು ಎಸಿ ಕಚೇರಿ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಅಂಗನವಾಡಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.
Published on

ಲಿಂಗಸುಗೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಹಾಯಕ ಆಯುಕ್ತರ ಕಚೇರಿ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಅಂಗನವಾಡಿ ನೌಕರರ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಜೂನ್ ಮತ್ತು ಜುಲೈ ಗೌರವಧನ ಬಿಡುಗಡೆ ಮಾಡಬೇಕು, ಅಂಗನವಾಡಿ ನೌಕರರಿಗೆ ಐಸಿಡಿಎಸ್ ಯೋಜನೆಯ ಕೆಲಸ ಮಾತ್ರ ವಹಿಸಬೇಕು. 2023ರ ಫೆ.3 ರಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು 2023ರ ಜುಲೈನಲ್ಲಿ ಸಿಎಂ ಸಿದ್ಧರಾಮಯ್ಯ ಹೆಚ್ಚಳ ಮಾಡಿದ್ದ ಗೌರವಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ 6ನೇ ಗ್ಯಾರಂಟಿ ಎಂದು 15 ಸಾವಿರ ರೂ.ಗೆ ಗೌರವಧನ ಹೆಚ್ಚಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಬೇಕು. ಅನುದಾನ ಬಿಡುಗಡೆ ವಿಳಂಬದಿಂದ ಮೊಟ್ಟೆ ಖರೀದಿ, ಮೊಬೈಲ್ ದುರಸ್ತಿಗೆ ಸ್ವಂತ ಖರ್ಚು ಮಾಡಬೇಕಾಗಿದ್ದು ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕೆಂದು ಒತ್ತಾಯಿಸಲಾಯಿತು.
ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಸರಸ್ವತಿ ಈಚನಾಳ, ಕಾರ್ಯದರ್ಶಿ ಮಹೇಶ್ವರಿ ಹಟ್ಟಿ, ಮಂಜುಳಾ, ವೀಣಾ, ಹುಲಿಗೆಮ್ಮ, ಭಾರತಿ, ಈರಮ್ಮ, ಚಾಂದ್‌ಬಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net