ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಎಲ್‌ವಿಡಿ ಕಾಲೇಜು ಮೈದಾನದಲ್ಲಿ ಪ್ರತಿದಿನ ಬೆಳಗ್ಗೆ 5.30 ರಿಂದ 7.30ವರೆಗೆ ಯೋಗ ಶಿಬಿರ ನಡೆಯಲಿದ್ದು, ಬದಲಾದ ಜೀವನ ಶೈಲಿಯಿಂದ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ನಿಯಮಿತ ಯೋಗದಿಂದ ರೋಗ ಮುಕ್ತವಾಗುವ ಅವಕಾಶವಿದೆ. ಮಧುಮೇಹ, ರಕ್ತದೊತ್ತಡ, ಥೈರಾಯರ್, ಧಮ್ಮು, ಬೆನ್ನನೋವು ಸೇರಿದಂತೆ ಅನೇಕ ರೋಗಗಳು ಯೋಗದಿಂದ ಗುಣಮುಖವಾಗುತ್ತವೆ. ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸಿ ಏಕಾಗ್ರತೆ ಮೂಡಿಸಲು ಸಹ ಯೋಗ ಸಹಕಾರಿಯಾಗಿದೆ. ಕಾರಣ ಹೆಚ್ಚು ಹೆಚ್ಚು ಜನರುನೊಂದಣಿ ಪಡೆದು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಉಚಿತವಾಗಿ ನಡೆಯುವ ಶಿಬಿರ ಸದುಪಯೋಗ ಪಡೆಯಬೇಕೆಂದರು.