ಬ್ರಾಹ್ಮಣ ಮಕ್ಕಳಿಗಾಗಿ ಉಚಿತ ಲೌಕಿಕ ಶಿಕ್ಷಣ

ಡಾ.ಎನ್. ವಾದಿರಾಜಾಚಾರ್ಯ
ಡಾ.ಎನ್. ವಾದಿರಾಜಾಚಾರ್ಯ
Published on
ರಾಯಚೂರು 
ಮಂತ್ರಾಲಯ ಹಾಗೂ ರಾಯಚೂರು ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ 8 ವರ್ಷ ಮೇಲ್ಪಟ್ಟ  ತ್ರಿಮಸ್ಥ ಬ್ರಾಹ್ಮಣ ಮಕ್ಕಳಿಗಾಗಿ ಉಚಿತ ಲೌಕಿಕ ಶಿಕ್ಷಣದ ತರಗತಿಗಳು ಜೂನ್ 15ರಿಂದ ಪ್ರಾರಂಭವಾಗಲಿದೆಂದು ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್. ವಾದಿರಾಜಾಚಾರ್ಯ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣ ಮಕ್ಕಳಿಗಾಗಿ ರಾಯಚೂರು ಹಾಗೂ ಮಂತ್ರಾಲಯ ಮಠದ ಶಾಖೆಯಲ್ಲಿ ಜ್ಯೋತಿಷ್ಯ, ವೇದಾ, ಶಾಸ್ತ್ರಗಳ ಅಧ್ಯಯನ, ಪೌರೋಹಿತ್ಯ,  ವೇದಾಂತ, ತರ್ಕ, ವ್ಯಾಕರಣ ಸೇರಿದಂತೆ ವಿಶೇಷವಾಗಿ ಉಚಿತ ಲೌಕಿಕ ಶಿಕ್ಷಣವನ್ನು ನೀಡಲಾಗುತ್ತದೆ. ಶಿಕ್ಷಣದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಊಟ, ವಸತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಬ್ರಾಹ್ಮಣ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ವಿದ್ಯಾಪೀಠಕ್ಕೆ ಸೇರಿಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಆನಂದಾಚಾರ್ಯ,ಎನ್.ಆರ್.ದ್ವಾರಕನಾಥಚಾರ್ಯ, ರಾಮಚಂದ್ರಾಚಾರ್ಯ ರಿತ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net