ರಾಯಚೂರಿನ ಆರ್‌ಎಪಿಎಂಸಿಎಸ್‌ನ ಆವರಣದಲ್ಲಿ ಗುರುವಾರ ಜಿಲ್ಲಾ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ರಾಯಚೂರು ಮತ್ತು ಸ್ಥಳೀಯ ಸಹಕಾರ ಸಂಘ ಸಂಸ್ಥೆಗಳ ವತಿಯಿಂದ ಸಹಕಾರ ಸಂಘಗಳ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ರಾಯಚೂರು ನಗರದ ಆರ್‌ಎಪಿಎಂಸಿಎಸ್‌ನ ಆವರಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ, ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ರಾಯಚೂರು ಮತ್ತು ಸ್ಥಳೀಯ ಸಹಕಾರ ಸಂಘ ಸಂಸ್ಥೆಗಳ ವತಿಯಿಂದ ಸಹಕಾರ ಸಂಘಗಳ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಆರ್‌ಎಪಿಎಂಸಿಎಸ್‌ನ ಉಪಾಧ್ಯಕ್ಷ ಶಶಿಧರ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭಗೊಂಡ ನಂತರ ಸಹಕಾರ ಚಳುವಳಿಗೆ ಆನೆ ಬಲ ಬಂದಂತಾಗಿದೆ. ಸಹಕಾರ ಸಂಘವು ಜು.6 ಕ್ಕೆ 5 ವರ್ಷಗಳನ್ನು ಪೂರ್ಣಗೊಳ್ಳುತ್ತಿರುವ ನಿಮಿತ್ತ ಸಂಘದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ನಿಮಿತ್ತ ಸಂಘದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದರು.
ನಂತರ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಅಧಿಕ ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ಸಹಕಾರ ಮಾರಾಟಾಧಿಕಾರಿ ಸಿದ್ದಣ್ಣ, ಯಶಸ್ವಿನಿ ಟ್ರಸ್ಟ್ ಸಂಯೋಜಕ ಪ್ರವೀಣಕುಮಾರ, ವೈದ್ಯರಾದ ಡಾ.ಅಪೂರ್ವ,ಡಾ.ಅಮರ ಪಾಟೀಲ್, ಡಾ.ಸಾಗರ,ಡಾ,ಜಹಿರ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗಾಯತ್ರಿ ವೈ ಸೇರಿ ಅನೇಕರು ಇದ್ದರು.