ವಾಲ್ಮೀಕಿ ಸಮುದಾಯಕ್ಕರ ನಾಲ್ಕು ಸಚಿವ ಸ್ಥಾನ ನೀಡಲಿ

ರಘುವೀರ ನಾಯಕ
ರಘುವೀರ ನಾಯಕ
Published on
ರಾಯಚೂರು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾಯಾಕ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಸಪಡಿಸಿ ರಾಜ್ಯ ಸರ್ಕಾರ ನಾಲ್ಕು ಸಚಿವ ಸ್ಥಾನ ನೀಡಬೇಕೆಂದು ಹೈದ್ರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ವಿಭಾಗೀಯ ಕಾರ್ಯದರ್ಶಿ ರಘುವೀರ ನಾಯಕ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 15 ಜನ ಪರಿಶಿಷ್ಟಪಂಗಡ ಶಾಸಕರಿದ್ದು 14 ಜನರು ಎಸ್‌ಟಿ ಮೀಸಲು ಕ್ಷೇತ್ರದಿಂದ ಮೂರು ಜನ ಸಾಮಾನ್ಯ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ಆದರೆ ಸಚಿವ ಸ್ಥಾನ ಹಂಚಿಕೆಯಲ್ಲಿ ಸಮಾಜಕ್ಕೆ ಅನ್ಯಾಯವಾಗಿದೆ. ಕೆ.ರಾಜಣ್ಣ ಸೇರಿದಂತೆ ಸಮಾಜದ ಸಚಿವರನ್ನು ತೆಗೆದುಹಾಕಿ ಮರಳಿ ಸೇರ್ಪಡೆ ಮಾಡಿಲ್ಲ. ನಾಲ್ಕು ಸಚಿವ ಸ್ಥಾನ ಸಮಾಜಕ್ಕೆ ಸಚಿವರನ್ನಾಗಿ ಮಾಡಬೇಕಿದೆ. ಜತೆಗೆ ಜಿಲ್ಲೆಯಲ್ಲಿ ನಾಲ್ಕು ಶಾಸಕರು, ಒಬ್ಬರು ಸಂಸದರು ಮೀಸಲು ಕ್ಷೇತ್ರವಾಗಿರುವ ರಾಯಚೂರು ಜಿಲ್ಲೆಗೆ ಒಂದು ಸಚಿವ ಸ್ಥಾನ ಪರಿಶಿಷ್ಟ ಪಂಗಡಕ್ಕೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮು ನಾಯಕ, ರಮೇಶ ನಾಯಕ, ಜೆಲ್ಲಿ ರಾಮಪ್ಪ, ರಾಮಕೃಷ್ಣ ನಾಯಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net